ಜ.30 ಕ್ಕೆ ನಗರದಲ್ಲಿಸೌಹಾರ್ಧದ ಮಾನವ ಸರಪಳಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.20: ಜಿಲ್ಲೆಯಲ್ಲಿ ಸೌಹಾರ್ದದ ಶಕ್ತಿಯುತ ಪರಂಪರೆ ಉಳಿಸುವ, ಬೆಳೆಸುವ, ಸಂರಕ್ಷಿಸುವ ಅಗತ್ಯವಿದೆಯೆಂದು  ಸೌಹಾರ್ದ- ಕರ್ನಾಟಕ ರಾಜ್ಯ ಸಮಿತಿ ಸಂಚಾಲಕ ಎಸ್.ವೈ ಗುರುಶಾಂತ್ ಹೇಳಿದ್ದಾರೆ.
ಅವರು ನಿನ್ನೆ ನಗರದ ಗಾಂಧಿ  ಭವನದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಸಾಕಷ್ಟು‌ ಸೌಹಾರ್ದ ತಾಣಗಳಿವೆ ಅವನ್ನು ಸಂರಕ್ಷಿಸಬೇಕಿದೆ. ಈ ಬಗ್ಗೆ ಕಾಳಜಿಯುಕ್ತ ಮನಸ್ಸುಗಳು ಒಂದುಗೂಡಬೇಕು. ಕಾರ್ಯಕ್ರದಲ್ಲಿ ಎಲ್ಲ ಸಮುದಾಯಗಳ ಒಗ್ಗೂಡುವಿಕೆ ಅಗತ್ಯ ಎಂದರು.
ಅಧ್ಯಕ್ಷ್ಯತೆ ವಹಿಸಿದ್ದ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ನಮ್ಮ  ಜಿಲ್ಲೆ ಎಂದಿಗೂ ಸೌಹಾರ್ದಕ್ಕೆ ಹೆಸರಾಗಿದೆ. ಆದರೂ ಈ ಪರಂಪರೆಯ ರಕ್ಷಣೆಗೆ ನಾವೆಲ್ಲರೂ ಶ್ರಮಿಸಬೇಕು ಇದಕ್ಕೆ ಕ.ಸಾ. ಪ ಸಂಪೂರ್ಣ ಬೆಂಬಲವಿದೆಯೆಂದರು.
ಜನವರಿ 30 ರಂದು ನಗರದಲ್ಲಿ  ಸೌಹಾರ್ದದತೆಯನ್ನು ಸಂಕೇತಿಸುವ ಮಾನವ ಸರಪಳಿಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು.
ಸಭೆಗೆ ಮುನ್ನ ಕಾರ್ಮಿಕ ಮುಖಂಡ ಜೆ.ಸತ್ಯಬಾಬು ಪ್ರಸ್ತಾವಿಕವಾಗಿ ಮಾತನಾಡಿದರು. ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕ ಪಿ.ಆರ್. ವೆಂಕಟೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ವಲಯ ಸಂಚಾಲಕ ಎಚ್. ಹುಸೇನಪ್ಪ, ಭೀಮ್ ಆರ್ಮಿಯ ಸಿ.ರಘು, ಸಿಯುಟಿಯುನ ಎಂ. ತಿಪ್ಪೇಸ್ವಾಮಿ,  ಹಿರಿಯ ಹೋರಾಟಗಾರ,  ಟಿ.ಜಿ.ವಿಠಲ್,‌ ಕೆ.ಮಾರೆಣ್ಣ, ಎಲ್. ನೀಲರೆಡ್ಡಿ, ಮಲ್ಲಮ್ಮ, ಈರಮ್ಮ ,ಎಚ್. ಹುಸೇನಪ್ಪ ಡಿ ಎಸ್ ಎಸ್ ರಾಜ್ಯ ವಲಯ ಸಂಚಾಲಕ, ಕೆ.ಎಂ.ಗುರುಸಿದ್ಧಮೂರ್ತಿ, ಚಿಕ್ಕ ಗಾದಿಲಿಂಗಪ್ಪ, ಪೃಥ್ವಿ, ಸೈಯದ್ ಅಜ್ಮದ್ ಹುಸೇನ್, ವೆಂಕಟೇಶ್ ಹೆಗಡೆ, ಈರಪ್ಪ, ಕೃಷ್ಣಪ್ಪ, ಡಾ. ಸೈಯದ್ ಜೈನುಲ್ಲ ಕ್ವಾದ್ರಿ
ಜನವಾದಿ ಮಹಿಳಾ ಸಂಘಟನೆಯ ಜೆ. ಚಂದ್ರಕುಮಾರಿ , ರಾಣಿ ಎಲಜಿಬತ್, ಸಂಗನಕಲ್ಲು ಕೃಷ್ಣಪ್ಪ ಮತ್ತಿರರು ಇದ್ದರು. ಇದೇ ಸಂದರ್ಭದಲ್ಲಿ ಸೌಹಾರ್ದ ಸಮಿತಿಯ ಪ್ರಧಾನ ಸಂಚಾಲಕರನ್ನಾಗಿ  ನಿಷ್ಠಿ ರುದ್ರಪ್ಪ ಇವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಗೆ ಉಳಿದವರನ್ನು ಸಹ ಸಂಚಾಲಕರು ಹಾಗೂ ಸಮಿತಿ ಸದಸ್ಯರೆಂದು ಘೋಷಿಸಲಾಯಿತು.