ಜ.29ರಿಂದ ಕರಿನೀರ ವೀರ ನಾಟಕ ಪ್ರದರ್ಶನ

ಸಂಜೆವಾಣಿ ನ್ಯೂಸ್
ಮೈಸೂರು: ಜ.26:- ತಾವು ಅಧ್ಯಕ್ಷರಾಗಿರುವ ರಂಗಭೂಮಿ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ವೀರ ಸಾರ್ವರ್ಕರ್ ಕುರಿತ ಕರಿನೀರ ವೀರ ಎಂಬ ನಾಟಕದ ಪ್ರದರ್ಶನ ಇದೇ ಜ. 29 ಮತ್ತು 30 ರಂದು ಸಂಜೆ 6.30ಕ್ಕೆ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಜೆ ಏಳಕ್ಕೆ ಆಯೋಜಿಸಲಾಗಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ತಾವೇ ಈ ನಾಟಕ ರಚಿಸಿ ನಿರ್ದೇಶಿಸಿದ್ದು, ಸಾವರ್ಕರ್ ಓರ್ವ ಅಸದೃಶ ಕ್ರಾಂತಿ ಪುರುಷ, ರಾಷ್ಟ್ರೀಯತೆಯ ಅಪ್ರತಿಮ ನಾಯಕ, ಹಿಂದುತ್ವದ ಪ್ರಹರಿ, ರಾಷ್ಟ್ರೀಯ ನೀತಿಜ್ಞ. ಆದರೆ ಇವರನ್ನು ಕುರಿತ ಅನೇಕ ಸತ್ಯಗಳನ್ನು ಮುಚ್ಚಿ ಹಾಕಲಾಗಿತ್ತು. ಹೀಗಾಗಿ ತಾವು ಹಲವಾರು ವರ್ಷ ಅಧ್ಯಯನ ಮಾಡಿ ಕನ್ನಡದಲ್ಲಿ ಇದೇ ಮೊದಲು ಎಂಬಂತೆ ಇವರನ್ನು ಕುರಿತ ನಾಟಕ ರಚಿಸಿರುವುದಾಗಿ ತಿಳಿಸಿದರು.
ಬಳಿಕ, ತಮ್ಮ ನಾಟಕಗಳನ್ನು ಕುರಿತಂತೆ ಅನೇಕ ಆರೋಪಗಳಿವೆ. ಆದರೆ ಅವೆಲ್ಲ ಕೇವಲ ಆರೋಪಗಳಷ್ಟೇ ಆಗಿವೆ. ಅಂತಹ ಸಂದರ್ಭದಲ್ಲೇ ವಿಮರ್ಶೆ ಸಾಧ್ಯ. ಇದ್ದುದನ್ನು ಇದ್ದ ಹಾಗೇ ಹೇಳಿದರೆ ? ಎಂಬ ಕನ್ನಡ ಗಾದೆ ಮಾತು ಈ ವೇಳೆ ನೆನಪಾಗುತ್ತದೆ. ನಗರದಲ್ಲಿನ ಪ್ರದರ್ಶನ ಬಳಿಕ ವಿವಿಧ ದಿನಗಳಂದು ಶಿವಮೊಗ್ಗ, ಶಿಕಾರಿಪುರ, ಸಾಗರ, ಹೊನ್ನಾಳಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಗುಬ್ಬಿ, ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿಯೂ ಪ್ರದರ್ಶನ ನಡೆಯಲಿದೆ. ಇದರ ಅವಧಿ ಎರಡೂವರೆ ಗಂಟೆಗಳಾಗಿದ್ದು ಪ್ರವೇಶ ದರ 200 ರೂ.,ಗಳಾಗಿವೆ ಎಂದು ಮಾಹಿತಿ ನೀಡಿದರು.