ಜ.28 ರಂದು ರಿಪಬ್ಲಿಕ್ ಡೇ ಚೆಸ್ ಕಪ್

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.22: ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ರಿಪಬ್ಲಿಕ್ ಡೇ ಕಪ್ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯನ್ನು ನಗರದ ಗುರುಭವನದಲ್ಲಿ ಜನವರಿ 28 ರಂದು ಏರ್ಪಡಿಸಲಾಗಿದೆ ಹಾಗೂ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ನೂರಕ್ಕೂ ಹೆಚ್ಚು ಬಾರಿ  ಹಾಗೂ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ತಿಳಿಸಿದರು.ಈ ಪಂದ್ಯಾವಳಿಯು  09 ವರ್ಷದೊಳಗಿನ ಮತ್ತು 13 ವರ್ಷದೊಳಗಿನ ಹಾಗೂ 19 ವರ್ಷದೊಳಗಿನ ಹಾಗೂ ಓಪನ್ ವಿಭಾಗದಲ್ಲಿ ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆಯಲಿದ್ದು ಎಲ್ಲಾ ವಿಭಾಗಗಳಲ್ಲಿ ಪ್ರಥಮ 10 ಸ್ಥಾನಗಳಿಗೆ ವಿಶೇಷ ಬಹುಮಾನವನ್ನು ವಿತರಿಸಲಾಗುವುದು ಹಾಗೂ 07-11-15-17 ವರ್ಷದೊಳಗಿನ ಸ್ಪರ್ದಾಳುಗಳಿಗೆ ಪ್ರಥಮ ಮೂರು ಸ್ಥಾನಗಳಿಗೆ ಪಾರಿತೋಷಕ ಹಾಗೂ ಮೂರರಿಂದ ಹತ್ತನೇ ಸ್ಥಾನದ ವರೆಗೆ ಮೆಡಲ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು ಈ ಪಂದ್ಯಾವಳಿಯಲ್ಲಿ ಮೂರು ವರ್ಷದಿಂದ 75 ವರ್ಷದವರೆಗೆ ಎಲ್ಲಾ ವಿಭಾಗದ  ಪುರುಷ ಮತ್ತು ಮಹಿಳೆಯರು ಭಾಗವಹಿಸ ಬಹುದು ಹಾಗೂ ಈ ಪಂದ್ಯಾವಳಿಯು ದಾವಣಗೆರೆ ಜಿಲ್ಲೆಯ ಸ್ಪರ್ಧಾಳುಗಳಿಗೆ ಮಾತ್ರ ಎಂದು ಸಂಘದ ಕಾರ್ಯದರ್ಶಿಯಾದ ಯುವರಾಜ್ ತಿಳಿಸಿದರು ಹೆಸರನ್ನು ನೋಂದಾಯಿಸುವವರು ಜ 27ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕಾಗಿ ತಿಳಿಸಿದರು ಹೆಸರನ್ನು ನೋಂದಾಯಿಸಲು ಈ ಕೆಳಗಿನ ನಂಬರನ್ನು ಸಂಪರ್ಕಿಸಲು ಕೋರಲಾಗಿದೆ (ಮಂಜುಳ )9945613469-7259310197