ಜ. 26 ರಿಂದ ಫೆ. 26ರವರೆಗೆ ಸಂವಿಧಾನ ಜಾಗೃತಿಯ ಜಾಥ

ಕೋಲಾರ,ಜ,೨೪- ಭಾರತದ ಸಂವಿಧಾನ ಅಂಗೀಕಾರವಾಗಿ ೭೫ ವರ್ಷದ ಆಚರಣೆಯ ಹಿನ್ನಲೆಯಲ್ಲಿ ಸಂವಿಧಾನ ಜಾಗೃತಿ ಜಾಥ ಮೂಲಕ ಸಾರ್ವಜನಿಕರಲ್ಲಿ ಹಾಗೂ ಭವಿಷ್ಯ ನಿರ್ಮಾತರಾದ ವಿಧ್ಯಾರ್ಥಿಗಳಲ್ಲಿ ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳ ಅರಿವುಂಟು ಮಾಡಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು,
ನಗರದ ಜಿಲ್ಲಾ ಆಡಳಿತ ಕಚೇರಿಯ ವಿಡಿಯೋ ಕಾನ್ಫೆರೆನ್ಸ್ ಹಾಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸಂವಿಧಾನದ ಪ್ರಮುಖ ಅಂಶಗಳ ಮಾಹಿತಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವುಂಟು ಮಾಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು,
ಜ,೨೬ ರಂದು ರಾಜ್ಯ ಮಟ್ಟದಲ್ಲಿ ಮುಖ್ಯ ಮಂತ್ರಿಗಳು ಚಾಲನೆ ನೀಡಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿಲ್ಲಾ ಕೇಂದ್ರದಲ್ಲಿ ಚಾಲನೆ ನೀಡುವರು, ಜ,೨೬ ರಿಂದ ಫೆ,೨೬ರವರೆಗೆ ಜಿಲ್ಲೆಯ ೧೫೬ ಗ್ರಾಮ ಪಂಚಾಯುತ್‌ಗಳಲ್ಲಿ ಡಿಜಿಟಲ್ ಹಾಗೂ ಸ್ಥಬ್ದ ಚಿತ್ರಗಳ ಮೂಲಕ ಸಂವಿಧಾನ ಆಶಯ ಮತ್ತು ಮೌಲ್ಯಗಳನ್ನು ಹಾಗೂ ಸರ್ಕಾರದ ಕಾರ್ಯಕ್ರಮವನ್ನುಳಗೊಂಡ ಎಲ್.ಇ.ಡಿ.ವಾಹನದಲ್ಲಿ ಪ್ರಸಾರ ಮಾಡಲು ಚಾಲನೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಶುಭಾಷಣ, ಪ್ರಬಂಧ ಸ್ವರ್ಧೆಗಳನ್ನು ಮತ್ತು ಉಪನ್ಯಾಸಗಳನ್ನು ಆಯೋಜಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಇದರ ಜೂತೆಗೆ ಫೆ,೨೬ರವರೆಗೆ ಒಂದು ತಿಂಗಳ ಕಾಲ ಜಾಗೃತಿ ಜಾಥವನ್ನು ೪ ವಾಹನಗಳ ಸ್ಥಬ್ದ ಚಿತ್ರಗಳ ಮೂಲಕ ಪ್ರಚಾರವನ್ನು ಕೈಗೊಂಡಿದ್ದು ಎಲ್ಲರ ಸಹಕಾರದೊಂದಿಗೆ ಯಶಸ್ಸುಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು,
ಸಂವಿಧಾನ ಜಾಗೃತಿ ಜಾಥ ವಾಹನ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಸ್ವಾಗತಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಕರು ಸಂಘ ಸಂಸ್ಥೆಗಳು ಎನ್.ಜಿ.ಓಗಳು ಸಂವಿಧಾನದ ಬಗ್ಗೆ ಅರಿವುಂಟು ಮಾಡಿಸಲು ನಿರ್ದೇಶನ ನೀಡಲಾಗಿದೆ. ಇದರ ಜೂತೆಗೆ ವಿವಿಧ ಸಂಘಟನೆಗಳು, ಕಲಾ ತಂಡಗಳು ಪ್ರಜಾಪ್ರಭುತ್ವದ ಧ್ಯೇಯೋದ್ದೇಶಗಳನ್ನು ಮೈಗೊಡಿಸುವ ದೆಸೆಯಲ್ಲಿ ಪ್ರಚಾರ ಗೊಳಿಸಲು ಚಾಲನೆ ನೀಡಲಾಗವುದು. ಈಗಾಗಲೇ ರೋಡ್ ಮ್ಯಾಪ್ ಮಾಡಲಾಗಿದೆ ಎಂದರು,
ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಲ್ಲಿ ಪ್ರಮುಖವಾಗಿ ಪ್ರಸಾರ ಮಾಡಲು ಧ್ವನಿವರ್ಧಕ ಹಾಗೂ ಕರಪತ್ರಗಳನ್ನು ಹಂಚಿಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು, ಜಿಲ್ಲಾ ಪಂಚಾಯತ್ ಸಿ.ಇ.ಓ, ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ನಗರಸಭೆಯ ಪೌರಾಯುಕ್ತರು, ಮುಖ್ಯ ಅಧಿಕಾರಿಗಳು ಪ್ರಸಾರ ಕಾರ್ಯದ ಉಸ್ತುವಾರಿಯನ್ನು ವಹಿಸಿದ್ದಾರೆ ಎಂದು ವಿವರಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಪದ್ಮಬಸವಂತಪ್ಪ, ಅಪರಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಳ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು,