ಜ.26ಕ್ಕೆ ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ತೆರೆಗೆ

ಸಂಜೆವಾಣಿ ನ್ಯೂಸ್
ಮೈಸೂರು: ಜ.20:- ಹಾಸ್ಯ ನಟನಾಗಿ ಸುಮಾರು 200 ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿರುವ ತಾವು ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಪಾತ್ರ ನಿರ್ವಹಿಸಿರುವ ಕುಟುಂಬ ಸಮೇತ ನೋಡಬಹುದಾದ ಉಪಾಧ್ಯಕ್ಷ' ಚಲನಚಿತ್ರ ಇದೇ ಜ. 26 ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಬೆಂಬಲಿಸಬೇಕೆಂದು ಖ್ಯಾತ ನಟ ಚಿಕ್ಕಣ್ಣ ಮನವಿ ಮಾಡಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಮೂಲತಃ ಮೈಸೂರಿನವರೇ ಆದ ತಾವು ಚಲನಚಿತ್ರ ರಂಗ ಪ್ರವೇಶಕ್ಕೂ ಮುನ್ನ ಗಾರೆ ಕೆಲಸ ಮಾಡುತ್ತಿದ್ದೆ. ಬಳಿಕ ಪ್ರೇಕ್ಷಕರ ಆಶೀರ್ವಾದಿಂದ ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿದ್ದು, ಈಗ ತಾವು ಪ್ರಥಮ ಬಾರಿಗೆ ನಾಯಕ ನಟರಾಗಿ ನಟಿಸುವ ಅವಕಾಶ ಉಪಾಧ್ಯಕ್ಷ ಚಿತ್ರದ ಮೂಲಕ ದೊರೆತಿದೆ. ಚಿತ್ರದಲ್ಲಿ ದ್ವಂದ್ವಾರ್ಥದ ಸಂಭಾಷಣೆ, ಮುಜುಗರ ಉಂಟು ಮಾಡುವ ದೃಶ್ಯಗಳಿಲ್ಲ. ತಮ್ಮ ಈ ಹಿಂದಿನಅಧ್ಯಕ್ಷ’ ಚಲನ ಚಿತ್ರದ ಮುಂದುವರಿದ ಭಾಗವಾಗಿದೆ. ಆ ಚಲನ ಚಿತ್ರದಲ್ಲಿದ್ದ ಬಹುತೇಕ ನಟರು ಇದರಲ್ಲಿಯೂ ನಟಿಸಿದ್ದಾರೆಂದರು.
ನಾಯಕಿ ನಟಿಯಾಗಿ ಪಾತ್ರ ನಿರ್ವಹಿಸಿರುವ ಮಲೈಕಾ, ನಿರ್ದೇಶಕ ಅನಿಲ್ ಕುಮಾರ್, ಬಾಲಸುಬ್ರಹ್ಮಣ್ಯಂ, ಧರ್ಮಣ್ಣ ಹಾಜರಿದ್ದರು.