ಜ.22 ರಂದು 9 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಬಾದಾಮಿ.ಜ.20: ಇಲ್ಲಿನ ವೀರಪುಲಿಕೇಶಿ ಒಳಾಂಗಣ ಕ್ರೀಡಾಂಗಣದಲ್ಲಿ ಜ.22 ರಂದು ಬಾದಾಮಿ ತಾಲೂಕಾ 9 ನೇಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಬಿ.ಎಫ್.ಹೊರಕೇರಿ ತಿಳಿಸಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಗರದ ಸಾಹಿತಿ ದಾಜೀಬಾ ಎಸ್. ಜಗದಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿದ್ದು, ಇದಕ್ಕೆ ಪೂರಕವಾಗಿ ನಗರದ ವಿವಿಧ ಸಂಘ ಸಂಸ್ಥೆಗಳು ಕೂಡಾ ಸಹಕಾರ ನೀಡಿವೆ ಎಂದರು.
ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಕಾಚಟ್ಟಿ ಸಮ್ಮೇಳನ ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬಾýರಿಯಾಗಿದೆ. ಈಗಾಗಲೇ ಬಾದಾಮಿಯಲ್ಲಿ ಒಂದು ಜಿಲ್ಲಾ ಮಟ್ಟದ ಹಾಗೂ 8 ತಾಲೂಕಾ ಮಟ್ಟದ ಸಮ್ಮೇಳನವನ್ನು ಆಯೋಜಿಸಿ ಯಶಸ್ವಿಗೊಳಿಸಲಾಗಿದೆ ಎಂದರು.
ಸಮ್ಮೇಳನ ಯಶಸ್ವಿಗೆ ಕನ್ನಡದ ಮನಗಳು ಗಟ್ಟಿಯಾಗಿ ನಿಂತು ಶ್ರಮಿಸಬೇಕಾಗಿದೆ ಎಂದು ಹೇಳಿದರು. ಕಸಾಪ ಮಾಜಿ ಅಧ್ಯಕ್ಷ ವೆಂಕಟೇಶ ಇನಾಮದಾರ ಮಾತನಾಡಿ ಸರ್ವಾಧ್ಯಕ್ಷರ ಮೆರವಣಿಗೆ, ಗೋಷ್ಟಿಗಳು, ನಾಲ್ಕು ಕಲಾ ತಂಡಗಳು, ವಿವಿಧ ಕ್ಷೆತ್ರಗಳಲ್ಲಿ ಸಾಧನೆಗೈದಿರುವ ಸಾಧಕರ ಸನ್ಮಾನ ನಡೆಯಲಿದೆ ಎಂದರು. ಲೋಕಣ್ಣ ಭಜಂತ್ರಿ ಮಾತನಾಡಿದರು. ಮಹಾಂತೇಶ ಈಳಗೇರ, ಬಿ.ಎಸ್. ಪವಾಡಶೆಟ್ಟಿ, ಬಿ.ಸಿ.ಪ್ಯಾಟಿ, ವಿ.ಎಸ್. ಶೆಟ್ಟರ, ಎಸ್.ಕೆ.ಜವಳಗದ್ದಿ, ಬಿ.ಎಸ್. ಅಬ್ಬಿಗೇರಿ, ವಿ.ಎಸ್. ಗಣಾಚಾರಿ, ಪಿ.ಎಂ. ಗಾಣಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅದು ಬೆಳಿಗ್ಗೆ 7.30 ಕ್ಕೆ ಧ್ವಜಾರೋಹಣ ರಾಷ್ಟ್ರಧ್ವಜ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ನಾಡಧ್ವಜ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಪರಿಷತ್ತಿನ ಧ್ವಜ ಕಸಾಪ ತಾಲೂಕಾಧ್ಯಕ್ಷ ಬಿ.ಎಫ್. ಹೊರಕೇರಿ ಅವರ ನೆರವೇರಿಸಲಿದ್ದಾರೆ.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಕಾಚಟ್ಟಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ನಂತರ 10,30 ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದೆ.
ಸಮ್ಮೇಳನವನ್ನು ಹಿರಿಯ ಸಾಹಿತಿ ಸದಾಶಿವಯ್ಯ ಹಿರೇಮಠ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಕೃತಿಗಳ ಬಿಡುಗಡೆ, ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಪುಸ್ತಕ ಮಳಿಗೆ, ಸಂಸದ ಪಿ.ಸಿ.ಗದ್ದಿಗೌಡರ ಕಲಾ ಮಳಿಗೆ ಉದ್ಘಾಟಿಸಲಿದ್ದಾರೆ.
ಸಾಹಿತಿ ಡಾ.ಕರವೀರಪ್ರಭು ಕ್ಯಾಲಕೊಂಡ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿ, ದಾಜೀಬಾ ಎಸ್. ಜಗದಾಳೆ ಸರ್ವಾಧ್ಯಕ್ಷರ ನುಡಿ ಹೇಳಲಿದ್ದಾರೆ. ತಾಲೂಕಿನ ಮಾಜಿ ಶಾಸಕರ, ಜನ ಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬಾದಾಮಿ ಪರಿಸರದ ವೈದ್ಯಕೀಯ ಪರಂಪರೆ, ಬಾದಾಮಿ ರಾಜಕೀಯ ಹೆಜ್ಜೆಗಳು, ಯುವ ಜನಾಂಗ ಮತ್ತು ಸಾಹಿತ್ಯ, ಸರ್ವಾಧ್ಯಕ್ಷರ ಬದುಕು ಬರಹ ಸಂವಾದ ಎಂಬ ನಾಲ್ಕು ಗೋಷ್ಟಿಗಳ ಜೊತೆಗೆ ಕವಿಗೋಷ್ಟಿ ಜರುಗಲಿದೆ. ಸಂಜೆ ಬಹಿರಂಗ ಅಧಿವೇಶನ, ಸನ್ಮಾನ ಮತ್ತು ಸಮಾರೋಪ ಸಮಾರಂಭ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.