ಜ.22 ರಂದು ಬೆಳ್ಳಿಹಬ್ಬದ ಉದ್ಘಾಟನೆ


ಹುಬ್ಬಳ್ಳಿ,ಜ.18: ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಬೆಳ್ಳಿಹಬ್ಬದ ಉದ್ಘಾಟನೆಯ ಸಮಾರಂಭವನ್ನು ನಗರದ ಗೋಕುಲ್ ರಸ್ತೆಯ ಕೇಶವ ಕುಂಜ ಎದುರಿಗಿನ ಹವ್ಯಕ ಸಾಂಸ್ಕೃತಿಕ ಸಭಾಭವನದಲ್ಲಿ ಜನೆವರಿ 22 ರಂದು ಬೆ. 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಗಣೇಶ್ ಹೆಗಡೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಯಿಂದ ಸಮಾರೋಪ ಸಮಾರಂಭ ಜರುಗಲಿದ್ದು, ಸಾನಿಧ್ಯವನ್ನು ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು, ಗೌರವ ಅಧ್ಯಕ್ಷತೆಯನ್ನು ಜ್ಯೋತಿಷಿ ಎಮ್. ಎಸ್.ಉಮಾಪತಿ, ಉದ್ಘಾಟನೆಯನ್ನು ಧಾರವಾಡ ಸಂಸ್ಕೃತ ಪಾಠಶಾಲೆಯ ಮುಖ್ಯ ಪ್ರಾಚಾರ್ಯ ನ್ಯಾಯ ಚೂಡಾಮಣಿ ರಾಜೇಶ್ವರ ಶಾಸ್ತ್ರಿಗಳು ನೆರವೇರಿಸಲಿದ್ದಾರೆ.
ಸ್ಮರಣ ಸಂಚಿಕೆ ಬಿಡುಗಡೆಯನ್ನು ಸಿದ್ಧಾಂತಿ ಕೆ.ಜಿ. ಪುಟ್ಟಹೊನ್ನಯ್ಯ ಹಾಗೂ ಡಾ. ಎಮ್.ಎಸ್.ಹುಲ್ಲೊಳ್ಳಿ, ಡಾ. ಭಾನುಪ್ರಕಾಶ ಶರ್ಮಾ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಇನ್ನೂ ಜ್ಯೋತಿಷ್ಯದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜ್ಯೋತಿಷಿ ವಿದ್ವಾಂಸರನ್ನು, ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಸನ್ಮಾನಿ ಗೌರವಿಸಲಾಗುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದಿನ ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ಡಾ. ಆನಂದ ಹಂದಿಗೋಳ, ಅಧ್ಯಕ್ಷತೆಯನ್ನು ಗಣೇಶ ಹೆಗಡೆ ವಹಿಸಲಿದ್ದು, ಮುಖ್ಯ ಸಮಾರೋಪ ಭಾಷಣವನ್ನು ನಾಗೇಂದ್ರಭಟ್ಟ ಹಿಟ್ನಳ್ಳಿ ಮಾಡಲಿದ್ದಾರೆ.
ಅಂದಿನ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ವಿ.ಆರ್.ಎಲ್ ಮುಖ್ಯಸ್ಥರಾದ ವಿಜಯ ಸಂಕೇಶ್ವರ, ಸುರೇಶ ಕೊಪ್ಪದ, ಪೆÇ್ರೀ. ಮಂಗಸೂಳಿ, ಎಸ್.ವಿ.ಘೋರ್ಪಡೆ, ಕೃಷ್ಣ ಭಟ್, ಬಸವರಾಜ್ ಕುರುಬೆಟ್, ನಾಗೇಶಶಾಸ್ತ್ರಿ ಸೇರಿದಂತೆ ಮುಂತಾದವರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ
ಡಾ. ಎಂ.ಎಸ್. ಹುಲ್ಲೋಳಿ, ಸುರೇಶ ಕೊಪ್ಪದ, ಶ್ರೀಕಾಂತ ಮಂಗಸೂಳಿ, ಆನಂದ ಹಂದಿಗೋಳ, ವಿ.ಜಿ. ತೊರವಿ, ಡಾ. ಪವನ ಜೋಶಿ, ಬಸವರಾಜ್ ಕುರುಬೇಟ, ಗುರುರಾಜ್ ಹರಕಲ್ ಸೇರಿದಂತೆ ಉಪಸ್ಥಿತರಿದ್ದರು.