ಜ.21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನ


ಹಾವೇರಿ,ರಿ.18: ಜನವರಿ 21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನವನ್ನು ಜಿಲ್ಲಾ ಭಾರತೀಯ ಜನತಾ ಪಾರ್ಟಿಯು ಆಯೋಜಿಸಿದೆ.
ಜಿಲ್ಲಾ ನೂತನ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಸಿದ್ದರಾಜು ಕಲಕೋಟಿ ಅವರು ಭಾರತೀಯ ಜನತಾ ಪಕ್ಷವು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ತಳ ಹಂತದಿಂದ ಪಕ್ಷ ಸಂಘಟಿಸಲು ಎಂಟು ದಿನಗಳ ಕಾಲ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ ಪತ್ರ ಹಂಚುವುದು, ಮನೆ ಮನೆಗೆ ದ್ವಜ ವಿತರಿಸುವುದು, ನಮ್ಮ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ನೆಹರು ಓಲೆಕಾರ್, ಪ್ರಭು ಹಿಂಟ್ನಳ್ಳಿ ರುದ್ರೇಶ ಚನ್ನಣ್ಣವರ, ಮದು ಹಂದ್ರಾಳ, ಚಿಕ್ಕಪ್ಪ ದೊಡ್ಡತಳವಾರ ಮಂತಾದವರು ಇದ್ದರು.