ಜ.21 ರಿಂದ ವಿಜಯ ಸಂಕಲ್ಪ ಅಭಿಯಾನ

ಧಾರವಾಡ,ಜ20 : ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಇದೇ ಜ.21 ರಿಂದ 29 ವರೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಶಿಸ್ತುಬದ್ಧವಾಗಿ ಸಂಘಟಿಸುವುದರ ಜೊತೆಗೆ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶವಿದೆ. ಈ ಅಭಿಯಾನದ ಭಾಗವಾಗಿ ಅವಳಿ ನಗರದ ಪ್ರತಿ ಮನೆಗೆ ತೆರಳಿ ಕರಪತ್ರಗಳನ್ನು ಹಂಚಲಾಗುವುದು. ಮತ್ತು ಸ್ಟಿಕರ್‍ಗಳನ್ನು ಅಂಟಿಸಲಾಗುವುದು. ಅಲ್ಲದೇ ಸರಕಾರದ ವಿವಿಧ ಯೋಜನೆಗಳಡಿ ಪ್ರಯೋಜನ ಪಡೆದ ಫಲಾನುಭವಿಗಳನ್ನು ಸಂಪರ್ಕಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ಮನೆಯವರ ಒಪ್ಪಿಗೆ ಪಡೆಯಲಾಗುವುದು.ಈ ಅಭಿಯಾನಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬೀದರನಲ್ಲಿ ಚಾಲನೆ ನೀಡುವರು ಎಂದರು.
ಈಗಾಗಲೇ ಭೂತ್ ಅಭಿಯಾನವನ್ನು ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಯಶಸ್ವಿಗೊಳಿಸಲಾಗಿದೆ.ಅಲ್ಲದೇ ಸದಸ್ಯತ್ವ ಅಭಿಯಾನ ಸಹ ಮುಂದುವರೆದಿದೆ ಎಂದು ಕಪಟಕರ ತಿಳಿಸಿದರು.
ಮುಖಂಡರಾದ ಈಶ್ವರಗೌಡ ಪಾಟೀಲ, ಬಸವರಜ ಗರಗ, ರವಿ ನಾಯಕ, ಸುನೀಲ ಮೋರೆ, ಪಾಲಿಕೆ ಸದಸ್ಯರಾದ ಮೋಹನ ರಾಮದುರ್ಗ, ಈರಣ್ಣ ಹಪ್ಪಳಿ ಸುದ್ದಿಗೋಷ್ಠಿಯಲ್ಲಿದ್ದರು.