ಜ. 21 ರಂದು ನಿಜಶರಣ ಅಂಬಿಗರ ಚೌಡಯ್ಯರವರ ಜಯಂತಿ

ಕಲಬುರಗಿ,ಜ.11: ಜಿಲ್ಲಾಡಳಿತ ವತಿಯಿಂದ ಇದೇ ಜನವರಿ 21 ರಂದು ಬೆಳಿಗ್ಗೆ 11.30 ಗಂಟೆಗೆ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶ್ರಿ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಅಧಿಕಾರಿಗಳು ತಮಗೆ ನೀಡಿದ ಕೆಲಸಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಶಿಷ್ಠಾಚಾರ ತಹಶೀಲ್ದಾರ ನೀಸರ ಅಹ್ಮದ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ವೇದಿಕೆ ಒಬ್ಬ ಸಮಿತಿ ಅಧ್ಯಕ್ಷರನ್ನು ಹಾಗೂ ಉಪನ್ಯಾಸಕರನ್ನು ನೇಮಕ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರು ಮಾತನಾಡಿ, ಸಂಗೀತ ಕಾರ್ಯಕ್ರಮಗಳು ಜರಗಲಿವೆ ವೇದಿಕೆ ಅಲಂಕಾರ ಮಾಡಲಾಗುವುದು ಬ್ಯಾನರ್‍ಗಳ ಆಮಂತ್ರಣ ಪತ್ರಗಳು ಮುದ್ರಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಸರಕಾರಿ ಅರೆ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬೆಳಿಗ್ಗೆ 9 ಗಂಟೆಗೆ ಆಚರಿಸಬೇಕೆಂದರು. ಸಮಾಜದ ಮುಖಂಡರಾದ ಶಿವಾನಂದ ಹೊನಗುಂಟಿ ಮಾತನಾಡಿ, ಸಮಿತಿ ಅಧ್ಯಕ್ಷರ ರಮೇಶ ನಾಟಿಕಾರ ಫಿರೋಜಾಬಾದ ಸಮಿತಿ ಅಧ್ಯಕ್ಷರನ್ನು ನೇಮಿಸಲು ಸಭೆಯ ಗಮನಕ್ಕೆ ತಂದರು.ಸಮಾಜದ ಸೇವೆಯನ್ನು ಗುರುತಿಸಿ 5 ಜನರಿಗೆ ಸನ್ಮಾನ ಮಾಡಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಬೆಳಿಗ್ಗೆ ನಿಜಅಂಬಿಗರ ಚೌಡಯ್ಯ ಅವರ ಭಾವಚಿತ್ರಿಕ್ಕೆ ಮಾಲಾರ್ಪಣೆ ಮಾಡಿ ನಗರೇಶ್ವರ ಸ್ಕೂಲನಿಂದ ಡಾ. ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಮೆರವಣೆಗೆ ಮಾಡಲಾಗುವುದು ಎಂದು ಸಮಾಜದ ಮುಖಂಡರು ಗಮನಕ್ಕೆ ತಂದರು.
ಸಭೆಯಲ್ಲಿ ಅಧಿಕಾರಿಗಳು ಸಮಾಜದ ಮುಖಂಡರಾದ ಪ್ರಕಾಶ ಕಮಕನೂರ, ಶಿವಶರಣಪ್ಪ ಕೋಬಾಳ, ಬಾಬುರಾವ ಕೋಬಾಳ, ನಿಂಗಣಾ ಕುಲಗುರ್ತಿ ಉಪಸ್ಥಿತರಿದರು.