ಜ.20ರಂದು ಕಿವುಡುತನ, ಮಾತಿನ ತೊಂದರೆಗಳ ಬೃಹತ್ ತಪಾಸಣಾ ಶಿಬಿರ

ಚಾಮರಾಜನಗರ, ಜ.18- ಜೆಎಸ್‍ಎಸ್ ಆಸ್ಪತ್ರೆ ಮೈಸೂರು ಹಾಗೂ ಡಾ.ಬಾಬು ಸೋಷಿಯಲ್ ವೆಲ್‍ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಕಿವುಡುತನ ಹಾಗೂ ಮಾತಿನ ತೊಂದರೆಗಳ ಬೃಹತ್ ತಪಾಸಣಾ ಶಿಬಿರವನ್ನು ಅಯೋಜಿಸಲಾಗಿದೆಎಂದುಟ್ರಸ್ಟ್ ಅಧ್ಯಕ್ಷ ಡಾ.ಎ.ಆರ್.ಬಾಬು ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್‍ಎಸ್‍ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆ ಶಿಬಿರ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮಕ್ಕಳು, ಹಿರಿಯರಿಗೆ ಕಿವುಡುತನ ಪರೀಕ್ಷೆ, ಬುದ್ದಿ ಮಾಂದ್ಯತೆ, ಧ್ವನಿ ತೊಂದರೆಗಳ ಪರೀಕ್ಷೆ, ಸೆರೆಬ್ರಲ್ ಪಾಲ್ಸಿ, ಓದಿನಲ್ಲಿ ತೊಂದರೆ ಇರುವ ಮಕ್ಕಳ ಪರೀಕ್ಷೆ, ಉಚ್ಚಾರಣೆ ದೋಷ ಪರೀಕ್ಷೆ, ಬೆಳೆಯುವ ಮಕ್ಕಳಿಗೆ ಮಾತು ಮತ್ತು ಭಾμÉಯ ತೊಂದರೆಗಳ ಪರೀಕ್ಷೆ, ಲಕ್ವಾ ಕಾಯಿಲೆ ನಂತರ ಮಾತಿನ ಪರೀಕ್ಷೆ, ಲಕ್ವಾ ಕಾಯಿಲೆ ನಂತರ ನುಂಗುವ ತೊಂದರೆಗಳ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುವುದು. ಮೈಸೂರಿನ ಜೆಎಸ್‍ಎಸ್‍ಆಸ್ಪತ್ರೆಯಲ್ಲಿ ಐದು ವರ್ಷದ ಒಳಗಿರುವ ಪೂರ್ಣಕಿವುಡುತನ ಇರುವ ಮಕ್ಕಳಿಗೆ ಕಾಕ್ಲಿಯರ್‍ಇಂಪ್ಲಾಂಟ್ ಆಪರೇಷನ್ ಅನ್ನು ಉಚಿತವಾಗಿ ಕೇಂದ್ರ ಸರ್ಕಾರದ ಅಡಿಪ್ ಹಾಗೂ ರಾಜ್ಯ ಸರ್ಕಾರದ ಸಸ್ತ್‍ಯೋಜನೆಯ ಅಡಿಯಲ್ಲಿ ಮಾಡಲಾಗುವುದು. ಇದು ಸುಮಾರು 7 ರಿಂದ 8 ಲಕ್ಷರೂ. ವೆಚ್ಚವಾಗಿದೆ ಎಂದರು.
ಈಗಾಗಲೇ ಚಾಮರಾಜನಗರ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ, ಹೃದಯ ರೋಗ ತಪಾಸಣೆ ಶಿಬಿರವನ್ನು ಹಮ್ಮಿಕೊಂಡು ಯಶ್ವಸಿಯಾಗಿ ನಡೆದಿದ್ದು, ತುಂಬಾಜನರಿಗೆ ಅನುಕೂಲವಾಗಿದೆ. ನಮ್ಮಟ್ರಸ್ಟ್ ಹಾಗೂ ಜೆಎಎಸ್ ಆಸ್ಪತ್ರೆ ಮೈಸೂರು ಸಹಯೋಗದಲ್ಲಿ ಪ್ರಥಮ ಬಾರಿಗೆ ಬೃಹತ್ ಕಿವುಡುತನ ಹಾಗೂ ಮಾತಿನ ತೊಂದರೆಗಳ ತಪಾಸಣಾ ಶಿಬಿರವನ್ನು ಅಯೋಜಿಸಲಾಗಿದೆ ಎಂದರು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಡಾ.ಬಾಬು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಜಿ.ಪಂ.ಮಾಜಿ ಸದಸ್ಯ ಸಿ.ಎನ್. ಬಾಲರಾಜು, ಬಿಜೆಪಿ ಮುಖಂಡರಾದ ನೂರೊಂದುಶೆಟ್ಟಿ, ಬಾಲಸುಬ್ರಹ್ಮಣ್ಯಂ ಹಾಜರಿದ್ದರು