ಜ.2ರಂದು ಕವನ ಸಂಕಲನ ಬಿಡುಗಡೆ

ದಾವಣಗೆರೆ,ಡಿ.31: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗಮ್ಯ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಜ.2ರಂದು ಸಂಜೆ 4 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಕವಿ ಸುರೇಂದ್ರ ವಾಂಕ್ಡೋತ್ ಅವರ ಕಾಡು ಮಲ್ಲಿಗೆ ಕವನ ಸಂಕಲನ ಲೋಕಾರ್ಪಣೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಗೀತ ಕಲಾವಿದ ದ್ವಾರಕೀಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡಯಟ್ ಪ್ರಾಚಾರ್ಯ ಹೆಚ್.ಕೆ.ಲಿಂಗರಾಜು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ವಸಂತಕುಮಾರ್ ಪೆರ್ಲ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಕೃತಿ ವಿಶ್ಲೇಷಣೆ ಮಾಡಲಿದ್ದಾರೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ ಕುರ್ಕಿ, ಬಿಇಒ ಜಿ.ಕೊಟ್ರೇಶ್, ಕೃಷಿಕ ಬದ್ಯಾ ನಾಯ್ಕ, ಸಾಹಿತಿ ಪ್ರಕಾಶ್ ಕೊಡಗನೂರು, ಡಾ.ಎನ್.ಚಂದ್ರೇಗೌಡ, ಸತೀಶ್ ಎಂ, ಮಂಜುನಾಥ್ ಬಿ.ಆರ್, ಹೆಚ್.ಕೃಷ್ಣ ನಾಯ್ಕ, ಜಿ.ಎಂ.ಆರ್.ಆರಾಧ್ಯ, ರಾಜೇಶ್ವರಿ ಕೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಗೀತ ಶಿಕ್ಷಕ ಗಿರೀಶ್, ಸಾವಿತಾ ಕೂಲಂಬಿ ಹಾಜರಿದ್ದರು.