ಜ.19 ರಂದು ರಾಜ್ಯ ಮಟ್ಟದ ಮಕ್ಕಳ ರಂಗೋತ್ಸವ

ಹುಬ್ಬಳ್ಳಿ,ಜ17: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಸಹಯೋಗದಲ್ಲಿ ಸುನಿಧಿ ಕಲಾ ಸೌರಭ (ರಿ) ಹುಬ್ಬಳ್ಳಿ ವತಿಯಿಂದ ರಾಜ್ಯಮಟ್ಟದ ಮಕ್ಕಳ ರಂಗೋತ್ಸವವನ್ನು ಜ. 19 ರಂದು ಬೆಳಿಗ್ಗೆ 11 ಕ್ಕೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸುನಿಧಿ ಕಲಾ ಸೌರಭದ ಕಾರ್ಯದರ್ಶಿ ವೀಣಾ ಆಠವಲೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮಕ್ಕಳಿಂದ ಮಕ್ಕಳಿಗಾಗಿ ಎಂಬ ಧ್ಯೇಯದೊಂದಿಗೆ ಸುನಿಧಿ ಕಲಾಸೌರಭ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ಈಗಾಗಲೇ ಮಕ್ಕಳಿಗಾಗಿ ಕಾವ್ಯ-ಕಮ್ಮಟ, ಕಥಾರಚನಾ ಕಮ್ಮಟ, ಮಕ್ಕಳ ಹಾಡು, ನೃತ್ಯ, ಮಕ್ಕಳ ನಾಟಕಗಳು, ಅಭಿಯನ ತರಬೇತಿಗಳು ಹಾಗೂ ನಾಟಕೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸಕಾರಾತ್ಮಕವಾಗಿ ಹೊರತೆಗೆಯುವ ಕೆಲಸ ಮಾಡುತ್ತಿದೆ. ಅದರಂತೆ ಇದೀಗ ಮಕ್ಕಳಿಂದ ಮಕ್ಕಳಿಗಾಗಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಮಕ್ಕಳ ರಂಗೋತ್ಸವದಲ್ಲಿ ರಾಜ್ಯದ ವಿವಿಧ ಕಲಾತಂಡಗಳಿಂದ ಎಂಟು ನಾಟಕಗಳ ಪ್ರದರ್ಶನಗೊಳ್ಳಲಿದೆ. ನಂತರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಇದಕ್ಕೆ ನಗರದ ವಿವಿಧ ಗಣ್ಯಮಾನ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಷ್ ನರೇಂದ್ರ, ಸುನಿಧಿ ನರೇಂದ್ರ ಇದ್ದರು.