ಜ.19ರಂದು ಪಟ್ಟಣದಲ್ಲಿ ಉದ್ಯೋಗ ಮೇಳ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.19: ಉತ್ತರ ಪ್ರದೇಶದ ನೊಯಿಡಾದಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಬೆಂಗಳೂರಿನ ಟಾಟಾ ಮೋಟಾರ್ಸ್ ಪೆÇ್ರೀವಿಜ್ ಮ್ಯಾನ್ ಸಿಸ್ಟಮ್ ವತಿಯಿಂದ ದಿನಾಂಕ 21-01-2024 ರ ಭಾನುವಾರ ಪಟ್ಟಣದ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ಚಾಲಕರ ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಿರುವುದಾಗಿ ಕಂಪನಿಯ ಕ್ಲಸ್ಟರ್ ಮುಖ್ಯಸ್ಥ ಆರ್.ಯತೀಂದ್ರ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಚಾಲಕರ ಉದ್ಯೋಗ ಮೇಳದ ಮಾಹಿತಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದರು.
ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ರವರ ಮಾರ್ಗದರ್ಶನದಲ್ಲಿ ಭಾನುವಾರ ಪಟ್ಟಣದ ಕೆ.ಪಿ.ಎಸ್ ಶಾಲಾ ಆವರಣದಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:00 ವರೆಗೆ ತಾಲ್ಲೂಕಿನಲ್ಲಿರುವ ವಾಣಿಜ್ಯ ಮತ್ತು ವಾಣಿಜ್ಯೇತರ ವಾಹನ ಚಾಲಕರುಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ತಾಲೂಕಿನ ಆಸಕ್ತರು ಈ ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಆರ್ ಯತೀಂದ್ರ ಮನವಿ ಮಾಡಿದರು.
ಗ್ರಾಮೀಣ ಪ್ರದೇಶದ ವಾಹನ ಚಾಲಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಭಾರತದ ಅತಿ ದೊಡ್ಡ ವಾಣಿಜ್ಯ ತಯಾರಿಕಾ ಘಟಕವಾದ ಟಾಟಾ ಮೋಟರ್ಸ್ ಈ ಉದ್ಯೋಗಮೇಳವನ್ನು ಆಯೋಜಿಸಿದ್ದು ಬೆಂಗಳೂರು ಮಹಾನಗರದಲ್ಲಿ ಸ್ಟಾರ್ ಬಸ್ ಇವಿಗಳನ್ನು ಮೆಟ್ರೋ ಪಾಲಿಟಿನ್ ಟ್ರಾನ್ಸ್ಪೋರ್ಟ್ ಕಾಪೆರ್Çರೇಷನ್‍ಗೆ (ಬಿಎಂಟಿಸಿ) ತಲುಪಿಸುವ ಮೂಲಕ ಬೆಂಗಳೂರಿನಲ್ಲಿ ವಿದ್ಯುದೀಕೃತ ಸಾರ್ವಜನಿಕ ಸಾರಿಗೆಯನ್ನು ಆರಂಭಿಸುವತ್ತ ದಾಪುಗಾಲು ಇಟ್ಟಿದೆ. ಟಾಟಾ ಮೋಟರ?ಸ್ ಅಂಗ ಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಲಿಮಿಟೆಡ್ ಮತ್ತು ಬಿಎಂಟಿಸಿ ನಡುವಿನ ಒಪ್ಪಂದದ ಪ್ರಕಾರ ಇದು ದೊಡ್ಡ ಆದೇಶದ ಭಾಗವಾಗಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. 921 ಅತ್ಯಾಧುನಿಕ 12 ಮೀಟರ್ ಕೆಳ ಮಹಡಿಯ ವಿದ್ಯುತ್ ಬಸ್ ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ನಮ್ಮ ಸಂಸ್ಥೆ ಹೊತ್ತಿಕೊಂಡಿದೆ.
ಈ ನಿಟ್ಟಿನಲ್ಲಿ 500ಕ್ಕೂ ಹೆಚ್ಚು ವಾಣಿಜ್ಯ ಮತ್ತು ವಾಣಿಜ್ಯೇತರ ವಾಹನ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಕಂಪನಿಗೆ ಅವಶ್ಯಕತೆ ಇದ್ದು ಶಾಸಕ ಹೆಚ್.ಟಿ.ಮಂಜುರವರ ಆಸಕ್ತಿಯಿಂದಾಗಿ ತಾಲೂಕಿನ ವಾಣಿಜ್ಯ ವಾಹನಗಳನ್ನು ಚಲಾಯಿಸುತ್ತಿರುವ ಸ್ಥಳೀಯರಿಗಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ತಾಲ್ಲೂಕಿನ ಆಸಕ್ತ ವಾಣಿಜ್ಯ ವಾಹನ ಚಾಲಕರು ಈ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ಉದ್ಯೋಗ ಮೇಳದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆವಿ ಡಿ.ಎಲ್ ಹಾಗೂ ಬ್ಯಾಡ್ಜ್ ಹೊಂದಿರಬೇಕು. ಎರಡು ವರ್ಷಗಳ ಬಸ್ ಅಥವಾ ಟ್ರಕ್ ಚಾಲನೆ ಮಾಡಿದ ಅನುಭವ ಇರಬೇಕು.
ಕಂಪನಿಯು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿದ್ದು ತಾಲೂಕಿನ ಎಲ್ಲಾ ಹೋಬಳಿಗಳ ಗ್ರಾಮಗಳಲ್ಲಿ ಇರುವ ವಾಹನ ಚಾಲಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಯತೀಂದ್ರ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮಹದೇವೇಗೌಡ, ಸುಕಂದರಾಜು, ಪ್ರಜ್ವಲ್, ರಾಹುಲ್, ಪ್ರಶಾಂತ್, ಶಶಾಂಕ್, ಸಚಿನ್ ಕೃಷ್ಣ, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರು ಹಾಜರಿದ್ದರು.