ಜ. 18, 19 ರಂದು ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ


ಸಂಜೆವಾಣಿ ವಾರ್ತೆ
 ಗಂಗಾವತಿ, ಜ.16: ತಾಲೂಕಿನ ದಾಸನಾಳ ಹಿರೇಮಠದಲ್ಲಿ ಜನೇವರಿ 18 ಮತ್ತು 19 ದಿನಗಳಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ-ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ.
ಜನೇವರಿ-18 ಗುರುವಾರದಂದು ಬೆಳಿಗ್ಗೆ 8.19 ರಿಂದ ಧರ್ಮಕಂಕಣ ಧಾರಣೆ, ಧರ್ಮಧ್ವಜಾರೋಹಣ, ಗೋಪೂಜೆ, ಗಂಗಾಪೂಜೆ ಮತ್ತು ಶ್ರೀ ಗಣಪತಿ ಪೂಜೆಯೊಂದಿಗೆ ವಿಶೇಷ ಹೋವಮ ಹವನ ಕಾರ್ಯಕ್ರಮಗಳು. ಬೆಳಿಗ್ಗೆ 11:30ಕ್ಕೆ ನಾಡಿನ ವಿವಿಧ ಮಠಗಳ ಶ್ರೀಗಳವರಿಂದ ಪೂರ್ಣಾಹುತಿ ಮತ್ತು ಮಹಾ ಮಂಗಳಾರುತಿ ನಂತರ ಮಹಾಪ್ರಸಾದ ವಿನಿಯೋಗ, ಸಂಜೆ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ಬಿರುದಾವಳಿ ಸಮೇತ ಸಕಲ ಮಂಗಲವಾದ್ಯಗಳೊಂದಿಗೆ ಪೂರ್ಣ ಕುಂಭ, ಕಳಸ ಕನ್ಡಿಗರ ಮುಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು, ನಂತರ ಧರ್ಮಸಭೆ ನಡೆಯುವುದು.
ಜನೇವರಿ-19 ಶುಕ್ರವಾರದಂದು ಪ್ರಾತಃಕಾಲ 5ಕ್ಕೆ ಪೂಜಾ ಸಂಕಲ್ಪ, 5.49ಕ್ಕೆ ವೀರಮಹೇಶ್ವರ ಜಂಗಮ ವಟುಗಳಿಗೆ ಅಯ್ಯಾಚಾರ ವ ಶಿವದೀಕ್ಷೆ, ಬೆಳಿಗ್ಗೆ 8ಕ್ಕೆ ಶ್ರೀಮದ್ ರಂಭಪುರಿ ಜಗದ್ಗುರುಗಳವರ “ಇಷ್ಟಲಿಂಗ ಪೂಜೆ, ತೀರ್ಥ ಪ್ರಸಾದ ವಿನಿಯೋಗ, 1008 ಮುತ್ತೈದೆಯರಿಗೆ ಉಡಿ ತುಂಬುವುದು, ಅವಿವಾಹಿತರಿಗೆ ಮಂಗಲ ಕಂಕಣಧಾರಣೆ ನಡೆಯಲಿದೆ. ನಂತರ ಮದ್ಯಾಹ್ನ ಮಹಾಪ್ರಸಾದ ಇರುತ್ತದೆ.
ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗವಹಿಸುವ ಪುರುಷರು ಶುಚಿರ್ಭೂತರಾಗಿ ಸಂಪ್ರದಾಯಿಕ ಪಂಚೆ ಉಟ್ಟು, ಶಲ್ಯ (ಟವೆಲ್) ಧರಿಸಿ ಬರುವುದು ಕಡ್ಡಾಯವಿದ್ದು, ಶಿವಧೀಕ್ಷೆ ಪಡೆಯುವ ಜಂಗಮ ವಟುಗಳು, ಉಡಿತುಂಬಿಸಿಕೊಳ್ಳುವ ಮುತ್ತೈದೆಯರು ಮತ್ತು ಮಂಗಲ ಕಂಕಣಧಾರಣೆ ಮಾಡಿಸಿಕೊಳ್ಳುವ ಅವಿವಾಹಿತರು ಜನೇವರಿ-17 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.
ಈ ಸಮಾರಂಭದಲ್ಲಿ ತಾಲೂಕಿನ ಸಾರ್ವಜನಿಕರು ಕುಟುಂಬ ಸಹಿತ ಪಾಲ್ಗೊಳ್ಳಬೇಕೆಂದು ದಾಸನಾಳ ಹಿರೇಮಠ ಸಂಸ್ಕೃತಿ ಪ್ರತಿಷ್ಠಾನ ಹಾಗೂ ದಾಸನಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಶಿಷ್ಯವೃಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.