ಜ.17ರಂದು ಪಲ್ಸ್ ಪೋಲಿಯೋ: ಸಮರ್ಪಕ ನಿರ್ವಹಣೆಗೆ ರವಿ ಸೂಚನೆ

ಚಾಮರಾಜನಗರ, ಜ.10- ಜನವರಿ 17ರಿಂದ 20ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೋಕಾರ್ಯಕ್ರಮವನ್ನು ಸಮರ್ಪಕ ಹೊಣೆಗಾರಿಕೆಯಿಂದ ನಿರ್ವಹಿಸುವಂತೆಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಲ್ಸ್ ಪೋಲಿಯೋಕಾರ್ಯಪಡೆಅಧ್ಯಕ್ಷರುಆಗಿರುವಡಾ.ಎಂ.ಆರ್. ರವಿ ಅವರು ಸೂಚನೆ ನೀಡಿದರು.
ನಗರದಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದರಾಷ್ಟ್ರೀಯ ಪಲ್ಸ್ ಪೋಲಿ ಯೋಕಾರ್ಯಕ್ರಮದಜಿಲ್ಲಾ ಸಮನ್ವಯ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯಅರೋಗ್ಯಅಭಿಯಾನದಡಿಜನವರಿ 17ರಂದು ದೇಶಾದ್ಯಂತಪಲ್ಸ್ ಪೋಲಿಯೋಕಾರ್ಯಕ್ರಮಆಯೋಜಿಸಲಾಗಿದೆ. ಇದರಅಂಗವಾಗಿ ಜಿಲ್ಲೆಯಲ್ಲಿಯೂ ಸಹ ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹನಿ ಹಾಕಲಾಗುವುದು.ಇದುರಾಷ್ಟ್ರೀಯಕಾರ್ಯಕ್ರಮವಾಗಿರುವುದರಿಂದಸಂಬಂಧಪಟ್ಟಎಲ್ಲಾಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತಕಾರ್ಯಚರಣೆಗೆ ಸಜ್ಜಾಗಬೇಕುಎಂದರು.
ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಪಲ್ಸ್ ಪೊಲಿಯೋಉದ್ದೇಶಕ್ಕಾಗಿ ಬೂಥ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿತಾಲೂಕಿನಲ್ಲಿತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಸಮಿತಿರಚಿಸಲಾಗಿದೆ.ಜ. 17ರಂದು ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು.ನಗರ ಪ್ರದೇಶದಲ್ಲಿ 2, 3 ಹಾಗೂ 4ನೇ ದಿನವೂ ಸಹ ಲಸಿಕೆ ಹಾಕಲು ಮನೆಮನೆಗೆ ಭೇಟಿ ನೀಡುವಕಾರ್ಯಕ್ರಮವಿದೆ.ಗ್ರಾಮಾಂತರ ಪ್ರದೇಶದಲ್ಲಿ 2 ಹಾಗೂ 3ನೇ ದಿನ ಮನೆಮನೆಗೆ ಭೇಟಿ ನೀಡಿ ಲಸಿಕೆ ಹನಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಈ ಬಾರಿ ಜಿಲ್ಲೆಯ 68682 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈ ಪೈಕಿ ಚಾಮರಾಜನಗರದ 23573, ಗುಂಡ್ಲುಪೇಟೆ 13731, ಕೊಳ್ಳೇಗಾಲ25352 ಹಾಗೂ ಯಳಂದೂರು ತಾಲೂಕಿನ 6026 ಮಕ್ಕಳು ಸೇರಿವೆ. ಜಿಲ್ಲೆಯಲ್ಲಿನ 5 ವರ್ಷದೊಳಗಿನ ಯಾವುದೇ ಮಗುವು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳೂವ ಮೂಲಕ ಪಲ್ಸ್ ಪೋಲಿಯೋ ಶೇ.100ರಷ್ಟು ಗುರಿ ಸಾಧಿಸಿ ಯಶಸ್ವಿಯಾಗುವಂತೆ ನೋಡಿಕೊಳ್ಳ್ಳಬೇಕು ಎಂದುಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಪಲ್ಸ್ ಪೋಲಿಯೋಕಾರ್ಯಕ್ರಮಕ್ಕಾಗಿಜಿಲ್ಲೆಯ ನಗರ ಪ್ರದೇಶಗಳಲ್ಲಿ 91 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 528 ಸೇರಿದಂತೆಒಟ್ಟು 619 ಬೂಥ್‍ಗಳನ್ನು ತೆರೆಂiÀiಲಾಗಿದ್ದು, ಚಾಮರಾಜನಗರತಾಲೂಕಿನಲ್ಲಿ 194, ಗುಂಡ್ಲು ಪೇಟೆಯ 158, ಕೊಳ್ಳೇಗಾಲ 223 ಹಾಗೂ ಯಳಂದೂರು ತಾಲೂಕಿಗೆ 44 ಲಸಿಕೆ ಬೂಥ್ ಗಳನ್ನು ನಿಗದಿ ಮಾಡಲಾಗಿದೆ.20 ಟ್ರಾನ್ಸಿಟ್ ಹಾಗೂ 8 ಮೊಬೈಲ್ ಬೂಥ್‍ಗಳನ್ನು ತೆರೆಯಲಾ ಗಿದ್ದು, 2572 ಲಸಿಕಾ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ನಿಯೋಜಿಸಿಕೊಳ್ಳಲಾಗಿದೆ.ಜಿಲ್ಲೆಯ ಜನನಿ ಬಿಡ ಪ್ರದೇಶದಲ್ಲಿಟ್ರಾನ್ಸಿಟ್ ಬೂಥ್‍ಗಳನ್ನು ತೆರೆಯಲಾಗಿದೆಎಂದರು.
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅಗತ್ಯವಾದ ಶಾಲೆ ಹಾಗೂ ಅಂಗನವಾಡಿ ಕೇಂದ್ರÀಗಳನ್ನು ಗುರುತಿಸಿ ಲಸಿಕೆ ಹಾಕುವ ಹಿಂದಿನ ದಿನವೇ ಸ್ಯಾನಿಟೈಸ್ ಮಾಡಿರಬೇಕು.ಪೋಲಿಯೋಲಸಿಕೆಯಿಂದ ಅದಿವಾಸಿ ಮಕ್ಕಳು ವಂಚಿತರಾಗಂತೆಗಮನಹರಿಸಬೇಕು.ಕಾಡಂಚಿನ, ದುರ್ಗಮ ಪ್ರದೇಶಗಳಲ್ಲಿ ಪೋಲಿಯೋ ಲಸಿಕೆ ವಾಹನ, ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ಮುಕ್ತ ಅವಕಾಶಕಲ್ಪಿಸಬೇಕು.