ಜ. 16 ಮತ್ತು 17ರಂದು ಎಸ್.ಬಿ.ಐ. ವತಿಯಿಂದ ಮನೆ ಮತ್ತು ಕಾರು ಸಾಲ ಉತ್ಸವ

ಕಲಬುರಗಿ:ಜ.14: ನಗರದಲ್ಲಿ ಎಸ್.ಬಿ.ಐ. ವತಿಯಿಂದ ಬೃಹತ ಪ್ರಮಾಣದ ಮನೆ ಮತ್ತು ಕಾರು ಸಾಲ ಉತ್ಸವವನ್ನು ದಿನಾಂಕ: 16-01-2021 ಮತ್ತು 17-01-2021ರಂದು (ಶನಿವಾರ ಮತ್ತು ಭಾನುವಾರ) ಬೆಳಗ್ಗೆ 10.30 ರಿಂದ ಸಂಜೆ 7.30ರವರೆಗೆ ನಗರದ ಕನ್ನಡ ಭವನ, ಸ್ಟೇಷನ್ ರಸ್ತೆ, ಕಲಬುರಗಿಯಲ್ಲಿ ಆಯೋಜಿಸಲಾಗಿದೆ.

ಈ ಉತ್ಸವದಲ್ಲಿ ಗೃಹ ನಿರ್ಮಾಣ, ಖರೀದಿ, ರಿಪೇರಿ, ಟಾಪ್‍ಆಪ್, ಟೇಕ್‍ಓವರ್ ಸಾಲ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ರೂ.2.67 ಲಕ್ಷಗಳವರೆಗೆ ಬಡ್ಡಿ ಸಹಾಯ ಧನದ ಅನುಕೂಲವಿದ್ದು, ಕಲಬುರಗಿ ನಗರದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಎಸ್‍ಬಿಐ ಪ್ರಾದೇಶಿಕ ಕಚೇರಿ-1ರ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರದೀಪ ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಉತ್ಸವ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೀನ್ ಶೇಖ ಮೊ. 96111 17067, ಕಾರ್ತಿಕ ಮೊ. 97425 70615 ಸಂಪರ್ಕಿಸಬೇಕೆಂದು ಕೋರಲಾಗಿದೆ.