ಜ.16ರಂದು ಲಿಂಗರಾಜ ಸಿರಗಾಪೂರಗೆ ಜನಸೇವಾ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ:ಜ.14: ಕಲಬುರಗಿಯ ವಿವಿಧ ಉದ್ದೇಶ ಸಮಾಜ ಸೇವಾ ಸಮಿತಿಯು ಜ.16 ಸೋಮವಾರ ರಂದು ಬೆಳಿಗ್ಗೆ 11 ಗಂಟೆಗೆ ನಗರದ ಹಾಗರಗಾ ರಸ್ತೆಯಲ್ಲಿರುವ ಪ್ರೀನ್ಸ್ ಫಂಕ್ಷನ್ ಹಾಲ್ ನಲ್ಲಿ ಕಲ್ಯಾಣ ನಾಡಿನ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರಿಗೆ ಜನಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಾಜಿದ್ ಅಲಿ ರಂಜೋಳ್ವಿ ಅವರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಾಜಿ ಶಾಸಕ ಅಲ್ಲಂಪ್ರಭು ಪ್ರಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡುವರು.ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ನಿಲಕಂಠ ಮೂಲಗೆ, ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ಅಸದ್ ಅನ್ಸಾರಿ, ಖ್ಯಾತ ಕವಿಗಳಾದ ಮಕ್ಬುಲ್ ಅಹ್ಮದ್ ನೈಯರ್, ರಿಜ್ವಾನ್ ಉರ್ ರೇಹ್ಮಾನ್ ಆಗಮಿಸುರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸಾಜಿದ್ ಅಲಿ ರಂಜೋಳ್ವಿ ಅವರು ವಹಿಸುವರು.

ನಿವೃತ್ತ ಮುಖ್ಯೋಪಾಧ್ಯಾಯ ಮಹ್ಮದ್ ಗೆಸುರರಾಜ, ಹಿರಿಯ ಪತ್ರಕರ್ತ ರಿಯಾಜ್ ಖತೀಬ್, ಸಾಹಿತಿ ಚಿಂತಕ ಜಿ.ಜಿ.ವಣಿಕ್ಯಾಳ, ಪತ್ರಕರ್ತ ಚಿಂತಕ ಡಾ.ಮಾಜಿದ ದಾಗಿ, ರಫೀಕ್ ಕಮಲಾಪೂರಿ, ಮಹ್ಮದ್ ಆರಿಫುದ್ದಿನ್, ಪತ್ರಕರ್ತ ಮುಬಿನ್ ಜಖ್ಮ್ ,ಸಮಾಜ ಸೇವಕರಾದ ಮಕ್ಬುಲ್ ಅಹ್ಮದ್ ಸಗ್ರಿ ಹಾಗೂ ಬಾಬಾ ಫಕ್ರುದ್ದೀನ್ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.