ಜ.15 ರ ಬೃಹತ್ ಯೋಗಥಾನ್‍ಕ್ಕೆ ಭರದ ಸಿದ್ಧತೆ

ಧಾರವಾಡ, ಜ.13: ಸ್ವಾತಂತ್ರ್ಯೋತ್ಸವ ಅಮೃತ್ ಮಹೋತ್ಸವದ ಅಂಗವಾಗಿ ಹಾಗೂ ಯೋಗವನ್ನು ಕಡ್ಡಾಯ ವಿಷಯವನ್ನಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಂಡಿರುವುದರಿಂದ, ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುμÁ್ಠನಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಹಭಾಗಿತ್ವದಲ್ಲಿ ಕಳೆದ ಅಂತರರಾಷ್ಟ್ರೀಯ ಯೋಗ ದಿನವಾದ ಜೂನ್ 21, 2022 ರಂದು ಯೋಗಥಾನ್ ಕಾರ್ಯಕ್ರಮವನ್ನು ರಾಷ್ಟ್ರದಾದ್ಯಂತ ಆರಂಭಿಸಲಾಗಿದೆ.
ಕರ್ನಾಟಕವು 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಆತಿಥ್ಯ ವಹಿಸುತ್ತಿರುವ ಹಿನ್ನಲೆಯಲ್ಲಿ ಯೋಗಥಾನ್ ಕಾರ್ಯಕ್ರಮದ ಅಂತಿಮ ಘಟ್ಟವನ್ನು ಜನವರಿ 15, 2023ರಂದು 10 ಸಾವಿರ ಯೋಗಬೋಧಕರು ಮತ್ತು 10 ಲಕ್ಷಕ್ಕೂ ಅಧಿಕ ಯೋಗಾಸಕ್ತರಿಂದ ಗಿನ್ನೆಸ್ ವಿಶ್ವದಾಖಲೆ ಪ್ರಯತ್ನವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಜನವರಿ 15 ರಂದು ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚೆನ್ನಮ್ಮ ಕ್ರೀಡಾಂಗಣ, ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣ ಮತ್ತು ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣ ಮತ್ತು ಹುಬ್ಬಳ್ಳಿಯ ರೈಲ್ವೆ ಕ್ರಿಕೇಟ್ ಮೈದಾನದಲ್ಲಿ ಬೃಹತ್ ಯೋಗಾಥಾನ್ ಸಂಘಟಿಸಲು ಜಿಲ್ಲಾಡಳಿತ ಭರದ ಸಿದ್ಧತೆ ಮಾಡಿಕೊಂಡಿದೆ.
ಅಂದು ಬೆಳಿಗ್ಗೆ ಅವಳಿ ನಗರದ ಈ ನಾಲ್ಕು ಮೈದಾನಗಳಲ್ಲಿ ಬೆಳಿಗ್ಗೆ 6-30 ರಿಂದ 9-30 ಗಂಟೆಯವರೆಗೆ ಯೋಗಾಥಾನ್ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿರುವ 7,500 ಪ್ರತಿನಿಧಿಗಳು ಮತ್ತು ಧಾರವಾಡ ಜಿಲ್ಲೆಯ ಸುಮಾರು 22 ಸಾವಿರ ಯೋಗಾಸಕ್ತರು ಭಾಗವಹಿಸಲಿದ್ದಾರೆ.
ಕ್ರೀಡಾಂಗಣಗಳಲ್ಲಿ ಯೋಗಾಥಾನ್ ಯಶಸ್ವಿಗಾಗಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕ್ರೀಡಾಂಗಣಗಳಲ್ಲಿ ಪ್ರತಿ ಯೋಗಾಪಟುಗೆ ನಿರ್ಧಿಷ್ಟ ಸ್ಥಳ ಗುರುತಿಸಿ, ಸುಣ್ಣದ ಗೆರೆ ಹಾಕಿ, ಯೋಗಪಟುಗಳು ಶಿಸ್ತುಬದ್ಧವಾಗಿ ಭಾಗವಹಿಸಲು ಅನುಕೂಲವಾಗುವಂತೆ ಮಾಡಲಾಗಿದೆ.
ಯುವಜನೋತ್ಸವಕ್ಕೆ ಆಗಮಿಸಿರುವ ವಿವಿಧ ರಾಜ್ಯಗಳ 7500 ಪ್ರತಿನಿಧಿಗಳಿಗೆ ಯುಪ್ಲೆಕ್ಸ್ ಮತ್ತು ಟಾಟಾ ಇಟಾಚಿ ಕಂಪನಿಗಳು ಉತ್ತಮ ಗುಣಮಟ್ಟದ ಯೋಗಾ ಮ್ಯಾಟ್‍ಗಳನ್ನು ಕೊಡುಗೆಯಾಗಿ ನೀಡಿವೆ. ಸ್ವಾಗತ ಸಮಿತಿಯು ಪ್ರತಿನಿಧಿಗಳ ವೆಲ್‍ಕಂ ಕಿಟ್‍ದೊಂದಿಗೆ ಈ ಮ್ಯಾಟ್‍ಗಳನ್ನು ಸಹ ನೀಡಿದೆ.