ಜ.15 ಕ್ಕೆ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಚಾಲನೆ

ದಾವಣಗೆರೆ.ಡಿ.೩೦;: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಜ. 15 ರಿಂದ ಫೆ. 5 ರ ವರೆಗೆ ನಿಧಿ ಸಂಗ್ರಹಣೆ ಅಭಿಯಾನ ನಡೆಯಲಿದೆ.ಇಲ್ಲಿನ ಕೆ.ಬಿ.ಬಡಾವಣೆಯಲ್ಲಿರುವ ‘ಜಯನಿವಾಸ’ ವನ್ನು ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಕ್ಕೆ ಅನುಕೂಲವಾಗುವ ಉದ್ದೇಶದಿಂದ ಜಿಲ್ಲಾ ಕಾರ್ಯಲಯವಾಗಿ  ಉದ್ಘಾಟಿಸಲಾಯಿತು.
ಈ ವೇಳೆ ಆವರಗೊಳ್ಳ ಪುರವರ್ಗ ಶ್ರೀ ಓಂಕಾರ ಸ್ವಾಮೀಜಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ವಿಭಾಗದ ಸಂಘಚಾಲಕ ಉಮಾಪತಿ ಮಾತನಾಡಿ, ಕರ್ನಾಟಕ ರಾಜ್ಯದ 27,500 ಹಳ್ಳಿಗಳನ್ನು, ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪುವ ಹಾಗೂ ಶ್ರೀರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆಯನ್ನು ವಿಶ್ವ ಹಿಂದೂ ಪರಿಷತ್ ಹಾಕಿಕೊಂಡಿದೆ. ಶ್ರೀರಾಮ ಮಂದಿರ ನಿರ್ಮಾಣದ ಅಂಗವಾಗಿ ಈಗಾಗಲೆ ಪ್ರತಿ ತಾಲ್ಲೂಕಿನಲ್ಲು ಕಾರ್ಯಕರ್ತರ ಸಮಾವೇಶಗಳು ನಡೆದಿವೆ ಎಂದರು. ಈ ಸಂದರ್ಭದಲ್ಲಿ ಪ್ರಾಂತ ಕುಟುಂಬ ಪ್ರಬೋಧನ ಸಂಯೋಜಕರಾದ ಕೆ.ಎಸ್. ರಮೇಶ್, ಭಾರತ ವಿಕಾಸ ಪರಿಷತ್ತಿನ ಪ್ರಾಂತ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಭಜರಂಗದಳದ ಜಿಲ್ಲಾ ಸಂಚಾಲಕರಾದ ರಾಜು, ಹಿಂದೂ ಜಾಗರಣ ವೇದಿಕೆಯ ಶಿವಮೊಗ್ಗ ವಿಭಾಗದ ಸಂಪರ್ಕ ಪ್ರಮುಖರಾದ ಸತೀಶ್ ಪೂಜಾರಿ, ಧರ್ಮ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ಮಲ್ಲಿಕಾರ್ಜುನ ಅಂಗಡಿ, ವಿಶ್ವ ಹಿಂದು ಪರಿಷತ್ತಿನ ನಗರಾಧ್ಯಕ್ಷರಾಗಿರುವ ರವಿ ಉಪಸ್ಥಿತರಿದ್ದರು.