ಜ.14 ರಂದು ಚಿತ್ರ ಸಂತೆ

ಕಲಬುರಗಿ,ಜ 12 : ಕಲಬುರಗಿ ನಗರದಲ್ಲಿ ಜ.14 ರಂದು 11 ನೇ ಚಿತ್ರಸಂತೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಸಂಯೋಜಕ ಡಾ. ಎ.ಎಸ್ ಪಾಟೀಲ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಕಳೆದ 11 ವರ್ಷದಿಂದ ಪ್ರತಿವರ್ಷದಂತೆ ಈ ವರ್ಷವು ಸಹ, ಜ. 14 ರಂದು ನಗರದ ಡಾ. ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ 11ನೇ ಚಿತ್ರಸಂತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಚಿತ್ರಕಲಾಕೃತಿಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕೆನ್ನುವ ದೆಸೆಯಲ್ಲಿ ವಿಕಾಸ ಅಕಾಡೆಮಿ ಕಲಬುರಗಿ ಸೇರಿದಂತೆ 9 ಸಂಸ್ಥೆಗಳ ಸಹಕಾರದಿಂದ ಕಳೆದ 10 ವರ್ಷದಿಂದ ಚಿತ್ರಸಂತೆ ಆಯೋಜನೆ ಮಾಡುತ್ತ ಬಂದಿದ್ದೇವೆ ಎಂದು ತಿಳಿಸಿದರು.
ಈ ಚಿತ್ರಸಂತೆಯಲ್ಲಿ ಪ್ರದರ್ಶನಗೊಳ್ಳಲಿರುವ ನಿಸರ್ಗಚಿತ್ರ ಅಮೂರ್ತಚಿತ್ರ ನೈಜಶೈಲಿಯ ಚಿತ್ರಗಳು ಗ್ರಾಫಿಕ್, ಮಾಧ್ಯಮದ ಕಲಾಕೃತಿಗಳು ಸಂಪ್ರದಾಯ ಶೈಲಿಯ ಚಿತ್ರಗಳು ಕೋಲಾಜ್ ಮಾಧ್ಯಮದ ಚಿತ್ರಗಳು ಮತ್ತು ಶಿಲ್ಪಕಲಾಕೃತಿಗಳು ಹೀಗೆ ದೃಶ್ಯಕಲೆಯ ವಿವಿಧ ಪ್ರಕಾರದ ಕಲಾಕೃತಿಗಳನ್ನು ನಗರದ ವಾಣಿಜ್ಯೋದ್ಯಮಿಗಳು, ವೈದ್ಯರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ವಾಸ್ತುಶಿಲ್ಪಗಳು , ಸೇರಿದಂತೆ ಜನಸಾಮಾನ್ಯರ ಕೂಡ ಅತ್ಯಂತ ಕಡಿಮೆ ಬೆಲೆಗಳಲ್ಲಿ ತಮಗೆ ಇಷ್ಟವಾದ ಚಿತ್ರಕಲಾಕೃತಿಗಳನ್ನು ಖರೀದಿಸಿ, ತಮ್ಮ ಮನೆಯ ಗೋಡೆಯ ಸೌಂದರ್ವವನ್ನು ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರಸಂತೆಯಲ್ಲಿ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಎಂ.ಎಸ್ ಬೆಳಮಗಿ, ವಿ.ಬಿ.ಬಿರಾದಾರ, ಡಾ.ಪರಶುರಾಮ ಪಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.