ಜ.14ರಿಂದ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ

ದಾವಣಗೆರೆ.ಜ.06 :  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜ.14ರಿಂದ ಕೂಡಲ ಸಂಗಮದಿಂದ ಪಂಚಲಕ್ಷ ಹೆಜ್ಜೆಗಳ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.ನಗರದ ಮಾಜಿ ಶಾಸಕ ಎಚ್ ಎಸ್ ಶಿವಶಂಕರ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಾದಯಾತ್ರೆಯಲ್ಲಿ ನಮ್ಮ ಯುವಕರು ರಸ್ತೆ ತಡೆ ಸೇರಿದಂತೆ ಇತರೆ ಹೋರಾಟ ಮಾಡುವಾಗ ಕ್ರಾಂತಿಯ ಹೆಜ್ಜೆ ಇಟ್ಟರೆ ಅದಕ್ಕೆ ಸರ‍್ಕಾರವೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಶಿಕ್ಷಣ ಮತ್ತು ಉದ್ಯೋಗದಲ್ಲಿ  2ಎ ಮೀಸಲಾತಿಗಾಗಿ ಈವರೆಗೂ ಶಾಂತಿಯುತವಾಗಿ ಸರಕಾರದ ಮೇಲೆ ಒತ್ತಡ ಹಾಕಲಾಗಿದೆ. ಆದರೆ, ಯಾವ ರ‍್ಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಕಳೆದ ಅಕ್ಟೋಬರ್ 28 ರಂದು ಬೆಳಗಾವಿ ಸುವರ್ಣ ಸೌಧದ ಮುಂಬಾಗ ಉಪವಾಸ ಮಾಡಿದ ವೇಳೆ ಸ್ವತಃ  ಸಿಎಂ ದೂರವಾಣಿಯಲ್ಲಿ ನಿಮ್ಮ ಬೇಡಿಕೆ ಈಡೇರಿಸಲು ಬದ್ಧರಾಗಿದ್ದು . ನೀವು ಉಪವಾಸ ವಾಪಾಸು ಪಡೆಯುವಂತೆ ಮನವಿ ಮಾಡಿದ್ದರು. ಒಂದು ತಿಂಗಳಲ್ಲಿ ಹಕ್ಕೊತ್ತಾಯ ಈಡೇರಿಸಬೇಕು. ಇಲ್ಲದಿದ್ದರೆ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುತ್ತವೆ ಎಂದು ಗಡುವು ನೀಡಿದ್ದವು. ಆದರೆ ಸಿಎಂ ನಮ್ಮ ಮನವಿಗೆ  ಇದುವರೆಗೂ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮ ಬೇಡಿಕೆ ಈಡೇರಬೇಕೆಂದರೆ ನಾವು ಸುಮ್ಮನೆ ಕುಳಿತರೆ ಆಗುವುದಿಲ್ಲ ಮೀಸಲಾತಿ ಬೇಕಂದರೆ ಹೋರಾಟವೇ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಜನವರಿ 14 ರೊಳಗೆ ವಿಶೇಷ ಸಚಿವ ಸಂಪುಟ ಕರೆದು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ನಿರ್ಧಾರ ಮಾಡದಿದ್ದರೆ ನಮ್ಮ ಪಾದಯಾತ್ರೆ ಖಚಿತ ಎಂದು ಎಚ್ಚರಿಕೆ ನೀಡಿದರು.ಅಂದು ಆರಂಭವಾಗುವ ಪಾದಯಾತ್ರೆ ಶಾಂತಿಯುತವಾಗಿ ಇರಬೇಕು ಎಂಬ ಆಶಯ ನಮ್ಮದು.  ಅದರೆ, ಯುವ ಸಮುದಾಯ ಶಾಂತಿ ಹೆಜ್ಜೆ ಇಡುವ ಬದಲು ಉಗ್ರ ಹೆಜ್ಜೆ ಇಟ್ಟರೆ ಅದಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಲಿದೆ ಇದು ಅಗಬಾರದು ಕೂಡ ಸಿಎಂ ಅವರು ನಮ್ಮ ಮೀಸಲಾತಿ ಯನ್ನು ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿ, ಪಂಚಮಸಾಲಿ ಸಮಾಜ ಹಿಂದುಳಿದ ಸಮಾಜವಾಗಿದೆ. ಈ ಸಮಾಜದ ಆರ್ಥಿಕ ಸಬಲತೆಗಾಗಿ ಸ್ವಾಮೀಜಿ ಕೂಡಲಸಂಗಮದಿಂದ ಬೆಂಗಳೂರಿನ ವಿಧಾನಸೌಧದವರಿಗೂ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ತಮ್ಮ ಅನುಕೂಲತೆಗಾಗಿ ನಮ್ಮ ಸ್ವಾಮಿಗಳು ಹೋರಾಟ ಮಾಡುತ್ತಿಲ್ಲ. ಇಡೀ ಪಂಚಮಸಾಲಿ ಸಮಾಜದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಒಗ್ಗಟು ಪ್ರದರ್ಶನ ಮತ್ತು ಈ ಹೋರಾಟ ಪಕ್ಷ ಆಧಾರಿತವಲ್ಲ, ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ಮಾತನಾಡಿ, ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದ ಸಿಎಂ ಯುಡಿಯೂರಪ್ಪ  ಇದುವರೆಗೂ ಸ್ಪಂದಿಸಿಲ್ಲ. ಅದ್ದರಿಂದ ಪಾದಯಾತ್ರೆಯಲ್ಲಿ ಸುಮಾರು 10 ರಿಂದ 15 ಲಕ್ಷ ಜನರು ಸೇರಲಿದ್ದಾರೆ.  ನಮ್ಮ ಮೀಸಲಾತಿ ಕೊಡುವವರೆಗೂ ಪಾದಯಾತ್ರೆ ನಡೆಯಲಿದೆ. ವಿಧಾನಸೌಧ ಮುತ್ತಿಗೆ ಖಚಿತ ಎಂದರು.  ಸುದ್ದಿಗೋಷ್ಠಿಯಲ್ಲಿ ಮೇಯರ್ ಅಜಯಕುಮಾರ್, ಎಚ್.ಎಸ್.ಅರವಿಂದ್, ಎಂ.ಟಿ.ಸುಭಾಷಚಂದ್ರು, ಮಹಾಂತೇಶ ಒಣರೊಟ್ಟಿ, ಪ್ರಭು ಕಲ್ಬುರ್ಗಿ, ರುದ್ರಮ್ಮ ಮಲ್ಲಿಕಾರ್ಜುನ್, ಚನ್ನಪ್ಪ ಸೇರಿದಂತೆ ಇತರರು ಇದ್ದರು.