
ಕರಜಗಿ :ಜ.8:ತಾಲೂಕಿನ ಮಾಶಾಳ ಗ್ರಾಮದಲ್ಲಿ ಜನವರಿ 13ರಿಂದ 17ರವರೆಗೆ ಶೀ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಕಮಿಟಿ ತಿಳಿಸಿದೆ.ಜನವರಿ 13ರಂದು ಮಲ್ಲಿಕಾರ್ಜುನ ದೇವರಿಗೆ ಎಣ್ಣೆಮಜ್ಜನ ಪ್ರಥಮ ಅಭಿಷೇಕ ಹಾಗೂ ಗ್ರಾಮದ ಪ್ರಮುಖ ಬೀದಿಗಳಿಂದ ಸಂಚರಿಸಿ ನಂದಿಧ್ವಜ, ಭಜನೆ ಮತ್ತು ವಾದ್ಯ ಮೇಳದೊಂದಿಗೆ ಕಾರ್ಯಕ್ರಮ 14ರಂದು ಭೋಗಿ ಪಲ್ಲಕ್ಕಿ ನಂದಿಧ್ವಜ ಮೆರವಣಿಗೆ ಸಮತಾ ವಾಚನ ಮತ್ತು ಅಕ್ಷತಾ ಕಾರ್ಯಕ್ರಮ ನಂತರ ಗೀಗೀ ಪದಗಳು ಜರುಗುವುದು.15ರಂದು ಮಕರ ಸಂಕ್ರಾಂತಿ ಸಾಯಂಕಾಲ ಗಂಗಸ್ಥಳ,ಶ್ರೀ ಸಿದ್ದರಾಮೇಶ್ವರ ದೇವರಿಗೆ ಅಭಿಷೇಕ, ಆರತಿ ಕಾರ್ಯಕ್ರಮ,ನಂತರ ಸುಶೋಭಿತ ಬಾಸಿಂಗ ಕಟ್ಟಿ ನಂದಿಧ್ವಜ ಮೆರವಣಿಗೆ ಮತ್ತು ಹೋಮ ಹವನ 16ರಂದು ರಾತ್ರಿ 9 ಗಂಟೆಗೆ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗುವುದು.ನಂತರ ಕಲಗಿ,ತುರಾಯಿ ಹಾಡುಗಳು ಜರುಗುವುದು.ರಾತ್ರಿ 9:30 ಗಂಟೆಗೆ ಮಗ ಹೋದರು ಮಾಂಗಲ್ಯ ಬೇಕು ಅರ್ಥಾತ್ ತಾಯಿಯ ಹಾಲು ವಿಷವಾಯಿತು ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.17ರಂದು ಕಪ್ಪಳಕಲಿ ಮತ್ತು ಜಾತ್ರಾ ಮಹಾಮಂಗಲಗೊಳ್ಳುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.