ಜ.13ರಂದು ಸಂಪುಟ ವಿಸ್ತರಣೆ ನಿಶ್ವಿತ: ಸಿಎಂ

The Chief Minister of Karnataka, Shri B.S. Yediyurappa meeting the Union Home Minister, Shri Amit Shah, in New Delhi on August 17, 2019.

ಮೈಸೂರು, ಜ.11: ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ. ಅದು ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಅದು ಅವತ್ತಿಗೆ ಗೊತ್ತಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಇಂದು ಬೆಳಿಗ್ಗೆ ಸುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ನವದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟವನ್ನು ಪುನರ್ ರಚಿಸಲು ಪಕ್ಷದ ವರಿಷ್ಠರಿಂದ ಹಸಿರು ನಿಶಾನೆ ದೊರೆತ್ತಿದ್ದು ಈದಿಸೆಯಲ್ಲಿ ಕ್ರಮ ಕೈಗೊಳುವುದಾಗಿ ತಿಳಿಸಿದರು.
ಜನವರಿ.13ರ ಮಧ್ಯಾಹ್ನ ಅಮಾವಾಸ್ಯೆ ಕಳೆಯುತ್ತದೆ. ಆ ನಂತರ ಒಳ್ಳೆಯ ಸಮಯ ಅಂತ ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಸಮಯ ಕೇಳಿಕೊಂಡು ನಿಮಗೂ ಸಮಯ ತಿಳಿಸುತ್ತೇವೆ ಎಂದರು. ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವವರ ಹೆಸರುಗಳನ್ನು ಹೇಳದೆ ಸಿ.ಎಂ ಗೌಪತ್ಯೆಯನ್ನು ಮೆರೆದರು.
ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಮಾಡಬೇಕು ಎಂದು ಕೊಂಡಿದ್ದೇನೆ. ಹಣಕಾಸು ಪರಿಸ್ಥಿತಿ ತಕ್ಕಂತೆ ಸೂಕ್ತವಾದ ನಿರ್ಧಾರ ತೆಗೆದುಕೊಂಡು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡುತ್ತೇನೆ ಎಂದು ಹೇಳಿದರು.