ಜ. 12ರಂದು ಶಿಕ್ಷಕರಿಗೆ ಯುವ ಬ್ರಿಗೇಡ್ ಕಾರ್ಯಾಗಾರ

ಕಲಬುರಗಿ.ಜ.9: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜ. 12ರಂದು ಬೆಳಿಗ್ಗೆ 9 ಗಂಟೆಗೆ ಶಿಕ್ಷಕರಿಗಾಗಿ ಯುವ ಬ್ರಿಗೇಡ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ನಗರ ಯುವ ಬ್ರಿಗೇಡ್ ವಿಸ್ತಾರಕ ಅನಿಲಕುಮಾರ್ ತಂಬಾಕೆ ಅವರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಬ್ರಿಗೇಡ್ ಸಂಸ್ಥಾಪಕರೂ ಹಾಗೂ ರಾಷ್ಟ್ರೀಯ ಪ್ರಖರ ಚಿಂತಕರೂ ಆದ ಸೂಲಿಬೆಲೆ ಚಕ್ರವರ್ತಿ ಅವರು ಪಾಲ್ಗೊಳ್ಳುವರು ಎಂದರು.
ಕಾರ್ಯಾಗಾರವನ್ನು ಹುಕ್ಕೇರಿಯ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯರು ಉದ್ಘಾಟಿಸುವರು. ಸುರೇಶ್ ಕುಲಕರ್ಣಿ ಅವರು ಶಿಕ್ಷಕ: ಮನೋವಿಜ್ಞಾನಿ ಕುರಿತು, ಜಯಸಿಂಹ ಅವರು ಸದಾ ಉತ್ಸಾಹ ಕಾಪಾಡಿಕೊಳ್ಳುವ ಮಾರ್ಗ ಕುರಿತು, ಕಿರಣ್ ಹೆಗ್ಗದ್ದೆ ಅವರು ಪ್ರಾಚೀನ ಭಾಋತದ ಸಾಧನೆಗಳ ಕುರಿತು ಮಾತನಾಡುವರು ಎಂದು ಅವರು ಹೇಳಿದರು.
ನಂತರ ನಡೆಯುವ ಚರ್ಚಾ ಕಾರ್ಯಕ್ರಮದಲ್ಲಿ ಪತ್ರಕರ್ತ ರವೀಂದ್ರ ದೇಶಮುಖ್ ಅವರು ಭಾಗವಹಿಸುವರು. ಸಮಾರೋಪ ಸಮಾರಂಭದಲ್ಲಿ ಸೂಲಿಬೆಲೆ ಚಕ್ರವರ್ತಿ ಅವರು ಹೊಸ ಶಿಕ್ಷಣ ನೀತಿಗೆ ಸಜ್ಜಾಗೋಣ ಎಂಬ ವಿಷಯದ ಕುರಿತು ಮಾತನಾಡುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್, ಪ್ರಶಾಂತ್, ಹರೀಶ್ ಮುಂತಾದವರು ಪಾಲ್ಗೊಂಡಿದ್ದರು.