ಜ.೮: ಪ.ಜಾ ಪ.ಪಂಗಡ ಕಾಂಗ್ರೆಸ್ ಐಕ್ಯತಾ ಸಮಾವೇಶ

ರಾಯಚೂರು,ಜ.೪- ಅಖಿಲ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಂಗ್ರೆಸ್ ಐಕ್ಯತಾ ಸಮಾವೇಶವನ್ನು ಜನವರಿ ೮ ರಂದು ಚಿತ್ರದುರ್ಗದ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಕೆ ನರಸಿಂಹ ನಾಯಕ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎ ಐ ಸಿ ಸಿ ಹಾಗೂ ಕೆಪಿಸಿಸಿ ಆದೇಶದ ಮೇರೆಗೆ ಈ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಹೋಬಳಿ, ಬೂತ್ ಮಟ್ಟಗಳಿಂದ ಸುಮಾರು ೧೦ ಲಕ್ಷ ಗಳಗಿಂತ ಮೇಲ್ಪಟ್ಟು ಜನ ಸೇರುವ ನಿರೀಕ್ಷೆ ಇದೆ ಎಂದರು.
ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಸಭೆಯ ಕ್ಷೇತ್ರಗಳಿಂದ ಒಂದೊಂದು ಕ್ಷೇತ್ರಕ್ಕೆ ೧೫ ರಿಂದ ೧೮ ಸಾವಿರ ಜನರು ತರಳಲಿದ್ದಾರೆ. ಈ ಐಕ್ಯತಾ ಸಮಾವೇಶಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನುಮಂತು ಜೂಕೂರು, ಮಲ್ಲಿಕಾರ್ಜುನ ನಾಯಕ,ರಾಮಪ್ಪ ದೇವನಪಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.