ಜ.೭: ಐಎಂಎ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

ರಾಯಚೂರು,ಜ.೫- ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್. ಬಿ ಲಕ್ಕೋಳ ಅವರು ರಾಯಚೂರು ನಗರಕ್ಕೆ ಆಗಮಿಸುತ್ತಿರುವ ಹಿನ್ನಲೆ ಅಭಿನಂದನಾ ಕಾರ್ಯಕ್ರಮ ಹಾಗೂ ಪ್ಯಾರಾಮೆಡಿಕಲ್ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಜನವರಿ ೭ ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಹಾಗೂ ಕಾರ್ಯದರ್ಶಿ ಡಾ.ಬಾಬುರಾವ್ ಶೇಗುಣಸಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಗರ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದ್ದು,ಅಂದು ಬೆಳಿಗ್ಗೆ ಕೃಷಿ ವಿಶ್ವ ವಿದ್ಯಾಲಯದ ದ್ವಾರದಿಂದ ಪುಷ್ಪರ್ಪಣೆ ಹಾಗೂ ಡೊಳ್ಳಿನ ಸಂಭ್ರಮದೊಂದಿಗೆ ಸಭಾಂಗಣದವರೆಗೆ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಳ್ಳಲಾಗುತ್ತದೆ ಎಂದರು.
ರಾಯಚೂರಿನ ೫ ಜನ ಖ್ಯಾತ ವೈದ್ಯರಿಗೆ ಕಲ್ಯಾಣ ಕರ್ನಾಟಕ ವೈದ್ಯರತ್ನ ಎಂಬ ಗೌರವದಿಂದ ಸನ್ಮಾನಿಸಲಾಗುವುದು ಎಂದು ಅವರು,ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ಮಾಡಲಿದ್ದಾರೆ.ಮುಖ್ಯ ಅಥಿತಿಗಳಾಗಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ ಆಗಮಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಡಾ. ಮಧುಸೂದನ್ ಕಾರಿಗನೂರ,ಎಂ. ಪವನ ಕುಮಾರ, ಡಾ.ನಾಗರಾಜ ಭಾಲ್ಕಿ, ಡಾ. ರವಿರಾಜನ್.ಕೆ ಡಾ.ಕಲ್ಲಪ್ಪ ಹೆರಕಲ್, ಡಾ.ಸುರೇಂದ್ರಬಾಬು, ಡಾ.ಸತೀಶ್,ಡಾ.ಮಂಜುನಾಥ ಬೆನಕಲ್ ಅವರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಕೆ.ಕೊಟ್ರೇಶ್,ಸಂಯೋಜನಾಧಿಕಾರಿ ಶರಣಪ್ಪ ನಂದಿಹಾಳ್,ಉಪನ್ಯಾಸಕರಾದ ರಶ್ಮಿ ನಾಗೋಲಿ,ಸ್ವಪ್ನಪೌಲ್ ಇದ್ದರು.