ಜ.೭ ಅಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ

ರಾಯಚೂರು,ಜ.೫- ಶ್ರೀ ವರಸಿದ್ದಿ ಅಂಜನೇಯ ಸ್ವಾಮಿ ನವೀಕರಿಸಿದ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಇದೇ ಜ.೭ ರಂದು ಹಮ್ಮಿಕೊಳ್ಳಲಾದ್ದು, ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಸಂಸ್ಥಾಪಕ ಮತ್ತು ಅಧ್ಯಕ್ಷ ರಾಜಾಶಂಕರ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಶ್ರೀ ವರಸಿದ್ಧಿ ಆಂಜನೇಯ ಉದ್ಧವಮೂರ್ತಿಯು ತ್ರೇತಾಯುಗದ ಸುಮಾರು ವರುಷಗಳ ಇತಿಹಾಸವಿದ್ದು ಮರಾತನ ಕಾಲದಿಂದಲು ಶ್ರೀ ರಾಮನ ಅನುಯಾಯಿಗಳು ಅಯೋಧ್ಯಯಿಂದ ಲಂಕೆಗೆ ಹೋಗುವ ಹಾದಿಯಲ್ಲಿ ಬೃಹತ್ ಅಶ್ವಥ್ ನಾರಾಯಣ ವೃಕ್ಷದ ಕೆಳಗೆ ಇಲ್ಲಿ ವಿಶ್ರಾಂತಿ ತೆಗೆದು ಕೊಂಡಿದ್ದಾರೆಂದು ಅವಧೂತರು ಹೇಳಿದ್ದಾರೆ ಎಂಬ ಪ್ರತೀತಿ ಇದೆ. ಶ್ರೀ ವರಸಿದ್ದಿ ಅಂಜನೇಯ ಸ್ವಾಮಿ ದೇವಸ್ಥಾನದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಇದೇ ಜ.೭ರಂದು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ವಹಿಸಲಿದ್ದಾರೆ. ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ ವಹಿಸಲಿದ್ದಾರೆ ಎಂದರು.
ಗುರುವಾರ ಶುದ್ದೋಕ ಪೂಜೆ, ಬೆಳಗ್ಗೆ ೭ ಗಂಟೆಗೆ ಸುಪ್ರಭಾತ , ೯ ಗಂಟೆಗೆ ಪಂಚಾಮೃತ ಅಭಿಷಕ, ೧೦ ಗಂಟೆಗೆ, ವಸ್ತ್ರಾಲಂಕಾರ, ನಂತರ ಪವನಮಾನ ಹೋಮ, ಪಂಚಾಮೃತ ಅಭಿಷೇಕ ಕಾರ್ಯಕ್ರಮ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳು ನಡೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಶಿವರಾಜಪಾಟೀಲ್, ನವೋದಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಆರ್.ರೆಡ್ಡಿ, ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸುರಾಜು, ಮಾಜಿ ಸಂಸದ ಬಿ.ವಿ.ನಾಯಕ, ಪದ್ಮಾವತಿ ಎಂ.ಈರಣ್ಣ, ಅಬಕಾರಿ ಗುತ್ತೇದಾರ ಈ.ಅಂಜನೇಯ, ಶಿವಶಂಕರ ವಕೀಲ್, ನಗರಸಭೆ ಸದಸ್ಯ ನಾಗರಾಜ ವಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾರೆಪ್ಪ, ಲಕ್ಷ್ಮಣ ಮಾಸ್ಟರ್, ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.