ಜ.೫ ಕ್ಕೆ ವೇದ ಸಂಭ್ರಮಾಚರಣೆ

ದಾವಣಗೆರೆ.ಜ.೩: ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಡಾ. ಶಿವರಾಜ್ ಕುಮಾರ್, ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ದಾವಣಗೆರೆ  ಜಿಲ್ಲಾ ಘಟಕ ವತಿಯಿಂದ ಡಾ. ಶಿವರಾಜ್ ಕುಮಾರ್ ಅವರ ೧೨೫  ನೇ ‘ವೇದ’ ಚಿತ್ರದ ಸಂಭ್ರಮಾಚರಣೆ ಯನ್ನು ಜ. ೫ರ  ಬೆಳಗ್ಗೆ ೧೧ ಗಂಟೆಗೆ ”ಶಿವ ಸಂಭ್ರಮ’ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ೫ ರಂದು ದಾವಣಗೆರೆಗೆ ಡಾ. ಶಿವರಾಜ್ ಕುಮಾರ್ ಮತ್ತು ನಿರ್ಮಾಪಕರಾದ ಗೀತಾ ಶಿವಕುಮಾರ್, ನಿರ್ದೇಶಕ ಎ. ಹರ್ಷ ಹಾಗೂ ಚಿತ್ರತಂಡದವರು  ಆಗಮಿಸಲಿದ್ದು, ಅಂದು ಬೆಳಿಗ್ಗೆ ೧೧ ಗಂಟೆಗೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ನಂತರ ದೇವಸ್ಥಾನದಿಂದ ಡಿಜೆಯೊಂದಿಗೆ ಚಿತ್ರತಂಡ ಮೆರವಣಿಗೆ ಹೊರಟು, ಇಎಸ್ಐ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಸಾಗಿ, ಕೆಟಿಜೆ ನಗರ, ಶಿವಪ್ಪಯ್ಯ ಸರ್ಕಲ್, ಜಯದೇವ ವೃತ್ತ, ಹಳೇ ಬಸ್ ನಿಲ್ದಾಣದ ಮಾರ್ಗವಾಗಿ, ಅಶೋಕ ಚಿತ್ರಮಂದಿರವನ್ನು ತಲುಪಲಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ದಾ.ಹ. ಶಿವಕುಮಾರ್, ಟಿ. ಚಂದ್ರಕುಮಾರ್, ವೈ. ಭಾಗ್ಯಾದೇವಿ, ತಿಪ್ಪೇಸ್ವಾಮಿ ಹಿಂಡಸಘಟ್ಟ, ಜಿ.ಪಿ. ಪ್ರಕಾಶ್ ಉಪಸ್ಥಿತರಿದ್ದರು.