ಜ.೪ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷರಿಗೆ ಆಹ್ವಾನ

ಕೋಲಾರ,ಡಿ.೨೭:ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜನವರಿ ೪ ರಂದು ನಡೆಯಲಿರುವ ೭ನೇ ಕೋಲಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ, ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆ.ಕೃ ಸೋಮಶೇಖರ್ ದಂಪತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರವದ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆ.ಕೃ ಸೋಮಶೇಖರ್, ಈ ಸಮ್ಮೇಳನದ ಯಶಸ್ಸು, ಎಲ್ಲಾ ಕನ್ನಡಪರ ಹೋರಾಟಗಾರರಿಗೆ ಸಲ್ಲುತ್ತದೆ. ಜಿಲ್ಲೆಯ ಎಲ್ಲಾ ಹಿರಿಯ, ಕಿರಿಯ ಕನ್ನಡಪರ ಹೋರಾಟಗಾರರು ಭಾಗವಹಿಸುವುದರ ಮೂಲಕ ಸಮ್ಮೇಳನ ಯಶಸ್ವಿಗೊಳಿಸಲು ಕೋರಿದರು. ವೃತ್ತಿಯಲ್ಲಿ ಬೆಮೆಲ್ ನೌಕರನಾದರೂ ದೊಡ್ಡ ಹನುಮಪ್ಪ, ಚಿಕ್ಕಹನುಮಪ್ಪನವರ ಕನ್ನಡಪರ ಹೋರಾಟದ ಪ್ರಭಾವ ನಮಗೆ ಸ್ಪೂರ್ತಿ ನೀಡಿದ್ದು, ಇದು ಎಲ್ಲಾ ಕನ್ನಡಪರ ಹೋರಾಟಗಾರರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಕೋ.ನಾ.ಪ್ರಭಾಕರ್, ನಾ.ಮಂಜುನಾಥ್, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ನಾಗಾನಂದ ಕೆಂಪರಾಜ್, ಕಾರ್ಯದರ್ಶಿಗಳಾದ ಅಶ್ವಥ್, ಆರ್.ಎಂ ವೆಂಕಟಸ್ವಾಮಿ, ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ, ಸಂಚಾಲಕ ರಾಜೇಂದ್ರಾಚಾರಿ, ತಾಲೂಕು ಗೌರವಾಧ್ಯಕ್ಷ ಕೆ.ಎನ್ ಪರಮೇಶ್ವರನ್, ಕಾರ್ಯದರ್ಶಿಗಳಾದ ಮುರಳಿಮೋಹನ್, ಶ್ರೀನಿವಾಸ್ ಮಾಗೇರಿ, ಹೋಬಳಿ ಅಧ್ಯಕ್ಷರುಗಳಾದ ವೆಂಕಟಕೃಷ್ಣಪ್ಪ, ಜಗದೀಶ್, ಸುರೇಶ್‌ಬಾಬು, ಚಿ.ನಾ. ನಾಗೇಶ್, ನಗರಾಧ್ಯಕ್ಷ ಬಿ.ಶಿವಕುಮಾರ್, ಮುಳಬಾಗಿಲು ತಾಲೂಕು ಅಧ್ಯಕ್ಷ ಜಯರಾಮರೆಡ್ಡಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಶಂಕರೇಗೌಡ, ಶಂಶೀರ್, ನಾರಾಯಣಪ್ಪ, ಮನೋಹರ್, ಮಂಜುನಾಥ್, ರಾಘವೇಂದ್ರ ಬಾಲಾಜಿ, ಕೃಷ್ಣಪ್ಪ, ಬೈಲಪ್ಪ, ರುದ್ರಪ್ಪ, ಶ್ರೀನಿವಾಸಮೂರ್ತಿ, ಮೋಹನಾಚಾರಿ, ಶರಣಪ್ಪ ಜಮಾದಾರ್, ಶ್ರೀನಿವಾಸಗೌಡ ಮುಂತಾದವರು ಉಪಸ್ಥಿತರಿದ್ದರು.