ಜ.೩ ರಂದು ಗೋವಿಂದ ಗಾನ ಕಾರ್ಯಕ್ರಮ : ಶೇಷಗಿರಿದಾಸ್

ರಾಯಚೂರು.ಜ.೧-ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ಅಂಗವಾಗಿ ಗೋವಿಂದ ಗಾನ ಕಾರ್ಯಕ್ರಮವನ್ನು ಜ.೩ ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಸಂಜೆ ೪ ಗಂಟೆಗೆ ಹಮ್ಮಿಕೊಂಡಿದೆ ಎಂದು ಹರಿದಾಸ ಸೇವಾ ಇಂಟರ್ ನ್ಯಾಷನಲ್ ಟ್ರಸ್ಟ್ ನ ಅಧ್ಯಕ್ಷ ಶೇಷಗಿರಿದಾಸ್ ಹೇಳಿದರು.
ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ
ಕಾರ್ಯಕ್ರಮಕ್ಕೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಲಿದ್ದಾರೆ. ದಾಸ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ಕೊಪ್ಪಳದ ಶ್ರೀ ರಘುಪೇಮಾಚಾರ್ಯ ಇವರಿಗೆ ಸಿರಿ ಗೋವಿಂದ ವಿಠಲ ಪ್ರಶಸ್ತಿಯನ್ನು ನೀಡಲಾಗುವುದು, ವಾಸವಿ ಭಜನಾಮಂಡಳಿ, ವೆಂಕಟರಮಣ ಕೃಷ್ಣ ಭಜನಾ ಮಂಡಳಿ , ನಗರೇಶ್ವರ ಭಜನಾ ಮಂಡಳಗಳ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಯುವ ಕಲಾವಿದರಾದ ರಾಕೇಶ ಕುಲಕರ್ಣಿ, ಲಕ್ಷ್ಮೀಕಾಂತ ಬಾಗಲವಾಡ, ಪಲ್ಲವಿ ಆಶೀತ ಮುಜುಮದಾರ , ವರದೇಂದ್ರ ಗಂಗಾ ಖೆಡ ಅವರು ತಮ್ಮ ದಾಸ ಗಾನಾಮೃತ ಕಾರ್ಯ ಕ್ರಮ ನಡೆಸಿಕೊಡಲಿದ್ದಾರೆ ಎಂದರು.
ಖ್ಯಾತ ವಿದ್ವಾಂಸರಾದ ಪಂಡಿತ ಕಲ್ಲಾಪುರ ಪವಮಾನಾಚಾರ್ಯ ಇವರಿಂದ ಆಸ್ತಿಹಾಳ ಗೋವಿಂದ ದಾಸರ ದೃಷ್ಟಿಯಲ್ಲಿ ಭಕ್ತಿ ಮತ್ತು ಭಗವಂತ ೪೪ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ , ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್ ಬೋಸರಾಜು , ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ , ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಹರೀಶ್ ರಾಮಸ್ವಾಮಿ, ಜಗನ್ನಾಥ ಕುಲಕರ್ಣಿ ಜಿಲ್ಲಾ ಅಧ್ಯಕ್ಷ ಅ.ಕ.ಬ್ರಾ.ಮ.ಸಭಾ , ತ್ರಿವಿಕ್ರಮ ಜೋಷಿ ಅಧ್ಯಕ್ಷ ಜಿಲ್ಲಾ ವಾಣಿಜ್ಯ ಉದ್ಯಮ ಸಂಘ, ಗುರುರಾಜಾಚಾರ್ಯ ತಾಳಕೊ ಅಧ್ಯಕ್ಷ ಭಾಗವಹಿಸಲಿದ್ದಾರೆ.
ನಗರದ ಖ್ಯಾತ ವಿದ್ವಾಂಸ ಮುರಳಿದರಾಚಾರ್ಯ ಗಲಗಲಿ , ನಗರದ ಖ್ಯಾತ ವೈದ್ಯ ಡಾ.ಹರೀಶ್ ಮೂರ್ತಿ, ಡಾ . ವಿದ್ಯಾ ಕಸ್ಥೆ ಇವರನ್ನು ವಿಶೇಷವಾಗ ಸನ್ಮಾನಿಸಲಾಗುವದ. ಖ್ಯಾತ ಸಂಗೀತ ರಾಯಚೂರು ಶೇಷಗಿರಿದಾಸ್ ಇವರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ದಾ ಗಾನ ಸಂಭ್ರಮ – ನೃತ್ಯ ಕುಂಚ ಸಂಗಮ ನಡೆಯಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರ ಕಲಾವಿದ ಹಳ್ಳೇರಾವ್ ಕೆಂಭಾವಿಯವರು, ನಗರದ ರಾಘವ ನಾಟ್ಯ ತಂಡದ ಕು ಶ್ರೇಯಸ್ ಹಾಗೂ ಸಂಗಡಿಗರು ಹಾಗೂ ಸ್ಥಳೀಯ ಯುವ ಹಾಡುಗಾರರು ಸೇರಿ ಏಕ ಕಾಲಕ್ಕೆ ಗಾಯನ , ಚಿತ್ರಕಲೆ , ಸಮೂಹ ಗೀತ , ನೃತ್ಯ ಹಾಗೂ ಕೋಲಾಟ ಪ್ರದರ್ಶನ ಪ್ರಸ್ತುತ ಪಡಿಸುತ್ತಾರೆ. ಹರಿದಾಸ ಸಾಹಿತ್ಯದ ಪ್ರಚಾರ ಹಾಗು ಅಸ್ತಿಹಾಳ ಗೋವಿಂದ ದಾಸರ ಸ್ಮರಣಿಯ ನಿಟ್ಟಿನಲ್ಲಿ ಹಮ್ಮಿಕೊಂಡ ಈ ವಿಶೇಷ ಕಾರ್ಯಕ್ರಮವನ್ನು ಕೋವಿಚ್ ೧೯ ರ ಸರಕಾರ ಹೊರಡಿಸಿದ ಮುಂಜಾಗ್ರತಾ ಕ್ರಮಗಳ ಆದೇಶದಂತೆ ನಾವು ಮಾಡುತ್ತಿದ್ದು ಸಜ್ಜನರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುರಳಿದರ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.