ಜ.೨೫ ವಳಬಳ್ಳಾರಿ ಜಾತ್ರೆ ಸಾಮೂಹಿಕ ವಿವಾಹ

ಸಿಂಧನೂರು.ಜ,೨೦- ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದಲ್ಲಿ ಜನವರಿ ೨೫ ರಂದು ಜಾತ್ರೆ, ಸಾಮೂಹಿಕ ವಿವಾಹ ಅಮೃತಮಹೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ತಮ್ಮ ನಿವಾಸದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸುವರ್ಣ ಗಿರಿ ವಿರಕ್ತಮಠ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ ೪೦ ನೇ ವರ್ಷದ ಜಾತ್ರಾ ಮಹೋತ್ಸವ ನೂತನ ಶಿಲಾ ಮಂಟಪ, ಉದ್ಘಾಟನೆ, ಸಾಮೂಹಿಕ ವಿವಾಹ ಸೇರಿದಂತೆ ಜನವರಿ ೨೫,೨೬,೨೭,ಮೂರು ದಿನಗಳ ಕಾಲ ಕಾರ್ಯಕ್ರಮಗಳು ಜರಗಲಿವೆ ಎಂದರು.
ಜ,೨೬ ರಂದು ಸದಾನಂದ ದೇವರ ಹಾಗೂ ನಾಗಭೂಷಣ ದೇವರುಗಳ ಪಟ್ಟಾಧಿಕಾರ, ರಕ್ತ ದಾನ ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಂಜೆ ಸರ್ವ ಧರ್ಮ ಭಾವೈಕ್ಯ ಸಮಾವೇಶ ನಡೆಯಲಿದ್ದು, ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಮ್ ಇಬ್ರಾಂ ಬರಲಿದ್ದಾರೆ ಎಂದರು.
ಜ.೨೭ ರಂದು ಉಚಿತ ಸಾಮೂಹಿಕ ವಿವಾಹ, ನಡಯಲಿದ್ದು, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ, ಯಡಿಯೂರಪ್ಪ ಸೇರಿದಂತೆ ಇತರ ಗಣ್ಯರು ಆಗಮಿಸಲಿದ್ದಾರೆ. ಸಂಜೆ ಹೂವಿನ ರಥೋತ್ಸವ ಜರುಗಲಿದೆ. ೨೮ ರಂದು ಕೃಷಿ ಗೋಷ್ಠಿ ನಡೆಯಲಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಬರುತ್ತಿದ್ದು, ಸಂಜೆ ತ್ರಿವಿಕ್ರಮ ದಾಸೋಹಿ ಸಿದ್ಧಲಿಂಗ ಮಹಾಸ್ವಾಮಿಗಳ ಅಮೃತ ಮಹೋತ್ಸವ ರಜತ ತುಲಾಬಾರ ನಡೆಯಲಿದೆ. ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಆಗಮಿಸಲಿದ್ದಾರೆ ಎಂದರು.
ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂರರು ಎಕರೆ ವಿಶಾಲ ಜಾಗದಲ್ಲಿ ಊಟ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ನಗರ ಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ, ಉಪಾಧ್ಯಕ್ಷರಾದ ಮುರ್ತಜ ಹುಸೇನ ಖಾಜಿಮಲ್ಲಿಕ ಸೇರಿದಂತೆ ಇತರರು ಇದ್ದರು.