ಜ.೨೪: ಪಂಚರತ್ನ ರಥಯಾತ್ರೆ, ಯಶಸ್ವಿಗೆ ಕರೆ

ಲಿಂಗಸಗೂರು,ಜ.೦೯- ಇದೆ ತಿಂಗಳು ೨೪ ರಂದು ಲಿಂಗಸಗೂರು ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಆಗಮಿಸಲಿದ್ದು, ಕಾರ್ಯಕರ್ತರು ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿದ್ದುಬಂಡಿಯವರು ಕರೆ ನೀಡಿದರು.
ಮಾಜಿ ಶಾಸಕ ಮಾನಪ್ಪ ವಜ್ಜಲ್‌ರ ನಾಟಕ ಕಂಪನಿ ನಾಲ್ಕು ಒಂದು ಕಡೆ ತಂದೆ ಮಗನ ಒಂದು ಕಂಪನಿ ಹಾಗೂ ನಾಗಪ್ಪ ಕರಿಯಪ್ಪರವರ ಒಂದು ಕಂಪನಿ ಇಲ್ಲಿರುವದೆ ಎನ್.ಡಿ. ವಡ್ಡರ ಕಂಪನಿ ನಾಟಕ ಕಂಪನಿ ಈ ನಾಟಕ ಕಂಪನಿ ವಿರುದ್ಧ ಸರ್ಕಾರ ತನಿಖೆ ಪ್ರಾರಂಭಿಸಿದ್ದಾರೆ. ಗುತ್ತಿಗೆ ಪಡೆದ ಕಂಪನಿ ನಾಟಕ ಕಂಪನಿಯಾಗಿದ್ದರಿಂದ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಎನ್ನಲಾಗುತ್ತಿದೆ ಇದರಿಂದ ಅಕ್ರಮ ಲೂಟಿ ಮಾಡುವ ಗುತ್ತಿಗೆದಾರರಿಗೆ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗದೆ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿದ್ದು ವೈ. ಬಂಡಿ ಇವರು ಮಾಜಿ ಶಾಸಕರ ವಿರುದ್ಧ ಹಾಗೂ ಅವರ ಸಹೋದರ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಪಟ್ಟಣದ ತಮ್ಮ ಕಾರ್ಯಾಲಯದ ಹತ್ತಿರ ಪಂಚರತ್ನ ರಥಯಾತ್ರೆಯ ಪೂರ್ವಭಾವಿಸಭೆಗೆ ಸಸಿಗೆ ನೀರುಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಜನತೆ ಕಂಡಿದ್ದಾರೆ. ಮುದಗಲ್ ಮತ್ತು ಹಟ್ಟಿ ಗ್ರಾಮಗಳಿಗೆ ಕುಡಿಯುವ ನೀರು ಕೊಡುವುದು ಇವರಿಂದ ಸಾಧ್ಯವಾಗಿಲ್ಲ ಆದರೂ ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಜನರ ಎದುರಿಗೆ ಬಹಿರಂಗವಾಗಿ ಸಮಸ್ಯೆಗಳನ್ನು ಎತ್ತಿಕೊಂಡು ಜಗಳವಾಡುತ್ತಿದ್ದಾರೆ ಹೊರತು, ಅವುಗಳ ಪರಿಹಾರಕ್ಕೆ ಯತ್ನಿಸುವುದಿಲ್ಲ. ಅಧಿಕಾರಿಗಳಿಗೆ ಪುರಸಭೆಯ ಅಧ್ಯಕ್ಷರುಗಳಿಗೆ ಅಸಂವಿಧಾನಕ ಶಬ್ಧಗಳು ಬಳಕೆಯಾಗುತ್ತಿವೆ.
ಹಣದ ಮದದಲ್ಲಿರುವ ಇವರು ಮುಖಂಡರನ್ನು ಮತ್ತು ಮತಗಳನ್ನು ಕೊಂಡುಕೊಳ್ಳುವ ಮಾತನಾಡುತಿದ್ದಾರೆ. ಇಂತವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲು ಕ್ಷೇತ್ರದಲ್ಲಿ ಪಕ್ಷವನ್ನು ಬಲಗೊಳಿಸಬೇಕಾಗಿದೆ. ಲಿಂಗಸುಗೂರ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಮಾನಪ್ಪ ಡಿ.ವಜ್ಜಲ್ ದುಡ್ಡಿನ ದರ್ಪಕ್ಕೆ ಯಾರು ಹೆದರಬೇಡಿ. ನಿಮ್ಮ ಜೊತೆ ಸದಾ ನಿಮ್ಮ ಮಗ, ಅಣ್ಣ ತಮ್ಮನಾಗಿ ನಿಮ್ಮ ಜೊತೆ ಇರುತ್ತೇನೆ. ಯಾರು ಏನು ಕೊಟ್ಟರು ತೆಗೆದುಕೊಳ್ಳಿ ಆದರೆ, ಈ ಸಲ ಮಾತ್ರ ನೀವೇ ಶಾಸಕರು ಎಂದು ಕ್ಷೇತ್ರದ ಜನತೆ ಮಾತನಾಡುತ್ತಿದ್ದು, ಎಂದು ಬಾವುಕರಾಗಿ ಹೇಳಿದರು.
ವಜ್ಜಲ್ ನಾಟಕ ಕಂಪನಿಗಳ ಆಟ ನೆಡೆಯುದಿಲ್ಲಾ. ನಾರಾಯಪುರ ಬಲದಂಡೆ ಕಾಲುವೆ ಆಧುನೀಕರಣ ಹೆಸರಿನಲ್ಲಿ ೧೪೦೦ ಕೋಟಿಗಳ ಹಗರಣದಲ್ಲಿ ವಜ್ಜಲ್ ಕಂಪನಿ ೭೦೦ ಕೋಟಿಗಳಷ್ಟು ದಂಡದ ರೂಪದಲ್ಲಿ ಹಣ ಕಟ್ಟಬೇಕಿದೆ ಆದರೆ ಇವರ ಪ್ರಾಮಾಣಿಕತೆಗೆ ಇದೆ ಸಾಕ್ಷಿಯಾಗಿದೆ.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ನಾಲ್ಕು ಬಾಗಿಲು ಇದ್ದು, ಇಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುವುದು ಕನಸಿನ ಮಾತು ಎಂದರು. ಪಂಚಾರತ್ನ ಯಾತ್ರೆಯ ಮುಖ್ಯ ಸಮಸ್ಯೆಗಳನ್ನು ಇಟ್ಟುಕೊಂಡು ಯಾತ್ರೆ ನಡೆಯುತ್ತಿದೆ. ಆರೋಗ್ಯ, ಶಿಕ್ಷಣ, ವಸತಿಸೌಲಭ್ಯ, ಕೃಷಿ ಹಾಗೂ ಯುವಕರು ಮಹಿಳಾ ಸಬಲೀಕರಣಕ್ಕಾಗಿ ಪಕ್ಷವು ದೃಢಸಂಕಲ್ಪವನ್ನು ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ನನಗೆ ಬೆಂಬಲಿಸುವುದರೊಂದಿಗೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕಾಗಿದೆ ಅದಕ್ಕಾಗಿ ಕ್ಷೇತ್ರದ ಪ್ರತಿಭೂತನಲ್ಲಿ ಕನಿಷ್ಟ ೨೫ ಜನರ ಕಾರ್ಯಪಡೆಯನ್ನು ರಚಿಸಬೇಕಾಗಿದೆ ಅದಕ್ಕಾಗಿ ಸನ್ನದ್ದರಾಗಿ ಎಂದರು.
ಪಂಚರತ್ನ ಯೋಜನೆ ರಥಯಾತ್ರೆಯು ತಾಲೂಕಿನ ಸಜ್ಜಲಗುಡ್ಡದಲ್ಲಿ ಪ್ರವೇಶವಾಗಲಿದೆ. ನಾಗರಾಳ ಮಾರ್ಗವಾಗಿ ಮುದಗಲ್ ನಂತರ ಲಿಂಗಸಗೂರು ಸಂಜೆ ಹಟ್ಟಿ ಕೋಲಾ ಮೂಲಕ ಗುರುಗುಂಟಾ ತಲುಪಿ ಅಲ್ಲಿ ವಾತ್ಸವ್ಯ ಮಾಡಲಿದೆ ಸದರಿ ಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಂಡೆಪ್ಪ ಕಾಶಂಪೂರ, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪನಾಯಕ, ಶರವಣ ಜಿಲ್ಲಾಧ್ಯಕ್ಷರು ವಿವಿಧ ಮುಖಂಡರು ಸೇರಿದಂತೆ ರಾಜ್ಯದ ನಾಯಕರು ಇರಲಿದ್ದಾರೆ.
ಕೇವಲ ದೇವಸ್ಥಾನ ರಸ್ತೆ ಚರಂಡಿ ಅಭಿವೃದ್ಧಿ ಕ್ಷೇತ್ರದ ಅಭಿವೃದ್ಧಿಯಲ್ಲ ಅದನ್ನೆ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ.
ನಂದವಾಡಗಿ ಯೋಜನೆಯ ರೂವಾರಿ ಎಂದು ಜನ ಹೇಳುತ್ತಿಲ್ಲ. ತಾವೆ ಹೇಳುತ್ತಾ ಓಡಾಡುತ್ತಿದ್ದಾರೆ, ಹೆಲಿಕ್ಯಾಪ್ಟರಿನಲ್ಲಿ ಮೇಲೆ ಓಡಾಡುವವರನ್ನು ನೋಡಬೇಡಿ ಎದುರಿಗೆ ಸಿಗುವ ಸಿದ್ದು ಬಂಡಿಯವರನ್ನು ಆಯ್ಕೆ ಮಾಡಿ ಎಂದು ಕಾರ್ಯಕ್ರಮದಲ್ಲಿ ಚಂದ್ರಶೇಖರ ಹಟ್ಟಿ, ಬಸವರಾಜ ಮಾಕಾಪುರ, ಸಿದ್ದಯ್ಯ ಮ್ಯಾಗಳಪೇಟೆ, ಚಂದ್ರಶೇಖರಸ್ವಾಮಿ ಕೋಲ್ಕಾರ ಸೇರಿದಂತೆ ಹಲವಾರು ಮಾತನಾಡಿದರು.
ಜೆಡಿಎಸ್ ಯುವಘಟಕದ ಅಧ್ಯಕ್ಷ ಇಮಿಯಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದಲ್ಲಿ ಆಗಮಿಸುವ ಪಂಚರತ್ನ ರಥಯಾತ್ರೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಹೇಳಿದರು.
ಇದೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷದ ತೊರೆದು ಹಲವಾರು ಮುಖಂಡರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರಿದರು.
ಈ ಸಂದರ್ಭದಲ್ಲಿ ಮನೋಹರರೆಡ್ಡಿ ಮುನ್ನೂರು, ಗೌರವಾಧ್ಯಕ್ಷ ಗೋವಿಂದರಾಜು ಅಮ್ಮಾಪುರ, ಅಮೀರಬೇಗ, ಉಸ್ತಾದ್ ದಾದಾ ಟೇಲರ್ ಲಿಂಗಸುಗೂರು ಸಿದ್ಧಯ್, ಸ್ವಾಮಿ ಮುದಗಲ್ ಬಸವರಾಜ ಅಡವಿಬಾವಿ ಶೇಖರಪ್ಪ ದೊರೆ, ಸೈಯದ್ ಪಾಷಾ, ದುರಗಪ್ಪನಾಯಕ ಕಾಚಾಪುರ, ಲಕ್ಷ್ಮಣ ನಾಯಕ ಗೌಡೂರು, ರಾಚಯ್ಯಸ್ವಾಮಿ ಗೌಡೂರು ಸೇರಿದಂತೆ ಅನೇಕರಿದ್ದರು.