ಜ.೨,೩ ಟಿಯುಸಿಐ ೧೦ನೇ ಅಖಿಲ ಭಾರತ ಸಮ್ಮೇಳನ

ರಾಯಚೂರು,ಡಿ.೨೭- ಜನವರಿ ೨೭ ರಿಂದ ೨೯ ರವರೆಗೆ ಮೂರು ದಿನಗಳ ಕಾಲ ಓರಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ ಟಿಯುಸಿಐನ ೧೦ನೇ ಅಖಿಲ ಭಾರತ ಸಮ್ಮೇಳನ ಪೂರಕವಾಗಿ ಜನವರಿ ೨,೩ ರಂದು ರಾಯಚೂರಿನಲ್ಲಿ ೯ ನೇ ರಾಜ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸಮ್ಮೇಳನದ ಮೊದಲ ದಿನದಂದು ನಗರದಲ್ಲಿ ಬೃಹತ್ ರ್ಯಾಲಿ ಮತ್ತು ಬಹಿರಂಗ ಅಧಿವೇಶನ ಜರುಗಲಿದೆ. ೨ ನೇ ದಿನ ಜೆಸಿಐ ಭವನದಲ್ಲಿ ಪ್ರತಿನಿಧಿಗಳ ಅಧಿವೇಶನ ನಡೆಯಲಿದೆ. ಬಹಿರಂಗ ಅಧಿವೇಶನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದರು.
ಸಮ್ಮೇಳನವನ್ನು ಸಿಪಿಐ( ಎಂಎಲ್ ) ರೆಡ್ ಸ್ಟಾರ್ ನ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಅವರು ಉದ್ಘಾಟಸಲಿದ್ದಾರೆ. ಬೆಂಗಳೂರಿನ ಖ್ಯಾತ ನ್ಯಾಯವಾದಿಗಳು, ಕಾರ್ಮಿಕ ಮುಖಂಡರಾದ ಎಸ್.ಬಾಲನ್, ಕರ್ನಾಟಕ ಶ್ರಮಿಕ ಶಕ್ತಿಯ ವರದ ರಾಜೇಂದ್ರ, ಬಳ್ಳಾರಿಯ ಎಐಟಿಯುಸಿ ಮುಖಂಡ ಎ.ಆರ್.ಎಂ. ಇಸ್ಮಾಯಿಲ್, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ರುಕ್ಕಿಣಿ, ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ಸಂದೀಪ್ ಬಿ.ಆರ್, ಎಐಕೆಕೆಎಸ್‌ನ ಕಂದೇಗಾಲ ಶ್ರೀನಿವಾಸ ಮೈಸೂರು ಭದ್ರಾವತಿಯ ಸುರೇಶ ಮುಂತಾದವರು ಪಾಲ್ಗೊಂಡು ಮಾತನಾಡಲಿದ್ದಾರೆ ಎಂದರು.
ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ದ್ರೋಹಿ ನವ-ಉದಾರವಾದಿ ನೀತಿಗಳ ವಿರುದ್ಧ ಬಲಿಷ್ಠ ಕಾರ್ಮಿಕ ಚಳುವಳಿ ಮುನ್ನಡೆಸಿ, ಹಿಂದುತ್ವ ಸರ್ವಾಧಿಕಾರಿ ಫ್ಯಾಸಿಸ್ಟ್ ಆಳ್ವಿಕೆಯ ವಿರುದ್ಧ ಪ್ರಭಲ ಸಂಘರ್ಷ ತೀವ್ರಗೊಳಿಸಿ, ರೈತಾಪಿ-ಕಾರ್ಮಿಕರೊಳಗೊಂಡು ವಿಶಾಲ ಜನತೆಯ ಐಕ್ಯತೆಯನ್ನು ಸಾಧಿಸಿಕೊಳ್ಳಲು ಮುಂದಾಗಿ ಎಂಬ ಕರೆಯೊಂದಿಗೆ ೯ನೇ ರಾಜ್ಯ ಸಮ್ಮೇಳನ ಮುನ್ನಡೆಯಲಿದೆ ಎಂದರು.
ಕೇಂದ್ರದ ಕರಡು ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯ ವರದಿ ಸಮ್ಮೇಳನದಲ್ಲಿ ಮಂಡನೆಗೊಳ್ಳಲಿವೆ. ರಾಜ್ಯದ ೧೧ ಜಿಲ್ಲೆಗಳ ೧೦೦ ಪ್ರತಿನಿಧಿಗಳು ಸಮ್ಮೇಳನದ ಕರಡು ದಸ್ತಾವೇಜುಗಳ ಮೇಲೆ ಸಾಮಾನ್ಯ ಚರ್ಚೆ ಕೈಗೊಳ್ಳಿದ್ದಾರೆ. ಸಮ್ಮೇಳನ ರ್ಯಲಿಯಲ್ಲಿ ವಿವಿಧ ವೃತ್ತಿ ಸಂಘಗಳ ಸಾವಿರಾರು ಕಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಿ. ಅಮರೇಶ, ಆರ್. ರೆಡ್ಡಿ, ಅಜೀಜ್ ಜಾಗೀರದಾರ್, ಜಿ. ಅಡವಿರಾವ್ ಇದ್ದರು.