ಜ.೨೩ ಕ್ಕೆ ಡಿಎಸ್ ಎಸ್ ಜಿಲ್ಲಾ ಸಮಿತಿ ಪ್ರತಿಭಟನೆ

ದಾವಣಗೆರೆ.ಜ.೨೧: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಜ.೨೩ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಬಿ.ದುಗ್ಗಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನಾ ಮೆರವಣಿಗೆ ಡಾ. ಅಂಬೇಡ್ಕರ್ ಸರ್ಕಲ್ ನಿಂದ  ಉಪವಿಭಾಗಾಧಿಕಾರಿಗಳ ಕಛೇರಿಗೆ ವರೆಗೆ ಸಾಗಿ,  ನ್ಯಾ. ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಹಾಗೂ ಭೂಮಿ, ವಸತಿ,ವಿದ್ಯಾರ್ಥಿ ವೇತನ, ಹಾಸ್ಟೆಲ್ ಮೂಲ ಸೌಲಭ್ಯ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ, ಬಗರ್ ಹುಕುಂ, ಸಾಗುವಳಿ ಅಧಿಕಾರಕ್ಕೆ ಆಗ್ರಹಿಸಲಾಗುವುದು. ನಂತರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಬಿ. ಹನುಮಂತಪ್ಪ, ಕೆಂಚಪ್ಪ ಈಚಘಟ್ಟ, ಕೊಡವನೂರು, ಲಕ್ಷ್ಮಣ, ಮಂಜುನಾಥ್, ಗೂಳಿ ತಿಪ್ಪೇಶಿ ಬಸಾಪುರ, ಎನ್. ರೇವಣಸಿದ್ದಪ್ಪ ಆವರಗೆರೆ, ಹನುಮಂತಪ್ಪ ಬೀರೂರು, ಮಲ್ಲೇಶಪ್ಪ ತರಕಾರಿ ಉಪಸ್ಥಿತರಿದ್ದರು.