ಜ.೨೧: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ

ರಾಯಚೂರು,ಜ.೨೦- ಸಂಸದ್ ಖೇಲೋ ಇಂಡಿಯಾ ವತಿಯಿಂದ ರಾಯಚೂರು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಜನವರಿ ೨೨ ರಂದು ಹಮ್ಮಿಕೊಳ್ಳಲಾಗಿದೆ ಎಂದು ರೈಲ್ವೆ ಬೋರ್ಡ್ ಸದಸ್ಯ ಹಾಗೂ ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಬುರಾವ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦-೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಪಂದ್ಯಾವಳಿಯಲ್ಲಿ ೩೦ ಪುರುಷ ತಂಡ ೧೦ ಮಹಿಳಾ ತಂಡಗಳು ಭಾಗವಹಿಸಲಿವೆ.ಪುರುಷ ತಂಡಕ್ಕೆ ಮೊದಲ ಬಹುಮಾನ ೨೫ ಸಾವಿರ, ದ್ವಿತೀಯ ಬಹುಮಾನ ೧೫ ಸಾವಿರ ಮಹಿಳಾ ತಂಡಕ್ಕೆ ಮೊದಲ ಬಹುಮಾನ ೧೫ ಸಾವಿರ ದ್ವಿತೀಯ ಬಹುಮಾನ ೧೦ ಸಾವಿರ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಅಧ್ಯಕ್ಷತೆ ಸಂಸದ ರಾಜಾ ಅಮರೇಶ್ವರ ನಾಯಕ ವಹಿಸಲಿದ್ದು,ಉದ್ಘಾಟನೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾಡಲಿದ್ದಾರೆ.ಮುಖ್ಯ ಅಥಿತಿಗಳಾಗಿ ನಗರಸಭೆ ಅಧ್ಯಕ್ಷ ಲಲಿತಾ ಕಡಗೊಳ ಅಂಜನೇಯ್ಯ,ನಗಾರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಿಮ್ಮಪ್ಪ ನಾಡಗೌಡ,ಎಪಿಎಂಸಿ ಅಧ್ಯಕ್ಷ ಅಚ್ಚುತ್ ರೆಡ್ಡಿ,ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್,ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ,ಮಾಜಿ ಶಾಸಕ ಎ.ಪಾಪಾರೆಡ್ಡಿ,ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಅವರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಮುಖ್ತಾರ್ ಅಹ್ಮದ್,ಸೈಯದ್ ಸಾದತ್ ಅಲಿ,ಶೇಖ ಅಲ್ತಾಫ್,ಬಸವರಾಜ ಅಸ್ಕಿಹಾಳ, ಅಬ್ದುಲ್ ಮನಾನ್ ಇದ್ದರು.