ಜ.೨೦ ರಿಂದ ದಾವಣಗೆರೆಯಲ್ಲಿ ಸೋಮೇಶ್ವರೋತ್ಸವ-೨೦೨೩

ದಾವಣಗೆರೆ.ಜ.೧೮: ಇದೇ ಜನವರಿ ೨೦,೨೧ ಹಾಗೂ೨೨ ರವರೆಗೆ ನಗರದ  ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಸಂಜೆ ೫.೪೫ ಕ್ಕೆ ‘ಸೋಮೇಶ್ವರೋತ್ಸವ-೨೦೨೩ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರಾದ ಎನ್. ಪ್ರಭಾವತಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. ೨೦ ರಂದು ಸೋಮೇಶ್ವರೋತ್ಸವಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಚಾಲನೆ ನೀಡಲಿದ್ದು, ಸಿದ್ಧರ ಬೆಟ್ಟದ ಶ್ರೀ ವೀರಭದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಸಾ.ಶಿ.ಇ. ಉಪನಿರ್ದೇಶಕ ಜಿ.ಆರ್. ತಿಪ್ಪೇಶಪ್ಪ ಆಗಮಿಸಲಿದ್ದಾರೆ. ಕಕಾನಿಪ ಅಧ್ಯಕ್ಷ ಮಂಜುನಾಥ ಏಕಬೋಟೆ ಹಾಗೂ ವೈದ್ಯರಾದ ಡಾ. ವಿದ್ಯಾ ವಿ. ಡಾ. ವಿ ಸಿದ್ದೇಶ್ವರನ್ ಅವರಿಗೆ ‘ಸೋಮೇಶ್ವರ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಜ.೨೧ ರಂದು ಹಮ್ಮಿಕೊಂಡಿರುವ ಪ್ರಶಸ್ತಿ ಪ್ರದಾನ. ಸಮಾರಂಭದ ಸಾನ್ನಿಧ್ಯವನ್ನು ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷ ಶ್ರೀ ಶಾರದೇಶಾನಂದ ಸ್ವಾಮಿಗಳು ವಹಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಗೌರವ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಅನ್ನ ದಾಸೋಹ ಭವನದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ಆಗಮಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಉಪಸ್ಥಿತರಿರುವರು.ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೆ.ಟಿ. ಜಯಪ್ಪ ಅವರಿಗೆ ‘ಶಿಕ್ಷಣ ಸಿರಿ’  ಪುರಸ್ಕಾರ,  ಉದ್ಯಮಿ ಬಕ್ಕೇಶ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೀತಾ ಬಾಲಚಂದ್ರ ಭಟ್  ಅವರಿಗೆ  ‘ಸೋಮೇಶ್ವರ ಸಿರಿ’ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ನಿಧಿ ಎಸ್. ನಾಯರ್ ಗೆ ‘ಸಾಧನ ಸಿರಿ’ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. ಜ.೨೨ ಕ್ಕೆ ನಡೆಯಲಿರುವ ಸಂಗೀತೋತ್ಸವ ಮತ್ತು ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಕಣ್ವಗುಪ್ಪಿ ಗವಿಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಸ್ವಾಮಿಗಳು ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಮತ್ತೂರು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎ. ರವೀಂದ್ರನಾಥ್, ಅಂಕಣಕಾರರು, ಲೇಖಕರು ಆದ ಎಸ್.ಎ. ಮಣಿಕಾಂತ್, ಅಂತಾರಾಷ್ಟ್ರೀಯ ಈಜು ಪಟು, ಕೆ.ಎಸ್. ವಿಶ್ವಾಸ್  ಆಗಮಿಸಲಿದ್ದಾರೆ. ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಲ್. ವಿವೇಕಾನಂದ ಅವರಿಗೆ ‘ ಸೋಮೇಶ್ವರ ಸಿರಿ’ ಪುರಸ್ಕಾರ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೧ ಅಂಕ ಗಳಿಸಿದ ಡಿ.ಆರ್. ಧೀರಜ್ ಗೆ ‘ಸಾಧನ ಸಿರಿ’ ಪುರಸ್ಕಾರ ನೀಡಲಾಗುವುದು. ನಂತರ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ಎಂ.ಡಿ. ಪಲ್ಲವಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸುರೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ,  ಆಡಳಿತಾಧಿಕಾರಿ   ಎನ್. ಆರ್. ಹರೀಶ್ ಬಾಬು, ಶೈಕ್ಷಣಿಕ ನಿರ್ದೇಶಕ ಟಿ.ಎಂ. ಪತ್ರೇಶ್, ಮುಖ್ಯ ಶಿಕ್ಷಕಿ ಹೆಚ್.ಎನ್. ಗಾಯತ್ರಿ ಹಾಗೂ ಸುಭಾನ್ ಬೂದಿಹಾಳ್ ಉಪಸ್ಥಿತರಿದ್ದರು.