ಜ.೧: ಕೋರೆಗಾಂವ್ ವಿಜಯೋತ್ಸವ, ಮೆರವಣಿಗೆ

ರಾಯಚೂರು.ಡಿ.೩೦- ೨೦೬ ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಜನವರಿ ೧ ರಂದು ಛಲವಾದಿ ಮಹಾಸಭಾ ವತಿಯಿಂದ ಕೋರೆಗಾಂವ್ ವಿಜಯಸ್ತಂಭದ ಪ್ರತಿಕೃತಿಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ ಎಂ. ವಸಂತ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಮಲಿಂಗೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು ಎಂದರು.
ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದೆ.ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳಕು ಹಾಕಿಕೊಂಡ ಸ್ಥಳವಿದು. ೫೦೦ ಮಂದಿ ಮಹಾರ್ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ವಿಲ್ಲದೆ ೨೮ ಸಾವಿರ ಮಂದಿಯ ಪೇಳ್ವೆಗಳ ಸೈನ್ಯದ ವಿರುದ್ಧ ನಿರಂತರ ೧೨ ಗಂಟೆ ಕಾದಾಡಿದ ಸ್ಮರಣೀಯ ಕದನವಿದು. ಇದರಲ್ಲಿ ಮಹಾರ್ ಸೈನಿಕರು ಇತಿಹಾಸ ಸೃಷ್ಟಿಸಿದರು.ಆದ್ದರಿಂದ ಎಲ್ಲಾ ಛಲವಾದಿ ಭಾಂದವರು, ಮುಖಂಡರು, ಅಂಬೇಡ್ಕರ್ ಅನುಯಾಯಿಗಳು ಪ್ರಗತಿಪರ ಚಿಂತಕರು, ನೌಕರ ಬಂಧುಗಳು, ಮಹಿಳೆಯರು ಮತ್ತು ಯುವಕರು ಸಹತ್ರ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೀರೇಶ ಗಾಣಧಾಳ, ವಿಜಯ ಪ್ರಸಾದ, ಶಿವರಾಜ ಜಾನೇಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.