ಜ.೧: ಕೊರೆಗಾಂವ್ ವಿಜಯೋತ್ಸವ ಆಚರಣೆ

ರಾಯಚೂರು,ಡಿ.೩೧- ಭೀಮಾ ಕೊರೆಗಾಂವ್ ದಿನದ ಅಂಗವಾಗಿ ಮಹಾರ್ ಯುವ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜನವರಿ ೧ ರಂದು ನಗರದ ರಾಂಪೂರಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಸ್ಟೇಶನ್ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ವರೆಗೆ ಸಂಜೆ ೫ಕ್ಕೆ ಮೆರವಣಿಗೆ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಶಿವಕುಮಾರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೧೮೧೮ ಜನವರಿ ೧ ರಂದು ನಡೆದ ಅಸ್ಪೃಶ್ಯದಿಂದ ಬಳಲಿದ ಮಹರರು ಹಾಗೂ ಪೂನಾದ ರಾಜಾ ಎರಡನೇ ಬಾಜಿರಾಯ ಪೇಶ್ವೆ ಸೈನ್ಯದ ನಡುವೆ ನಡೆದ ಸ್ವಾಭಿಮಾನದ ಯುದ್ಧದಲ್ಲಿ ೫೦೦ ಜನ ಮಹಾರ್ ಜನರಿದ್ದ ಸೈನಿಕರು ೨೫ಸಾವಿರ ಸೈನಿಕರಿದ್ದ ಪೇಶ್ವೆ ಸೈನಿಕರನ್ನು ದಿಕ್ಕು ಪಾಲಾಗಿ ಓಡಿ ಹೋಗುವಂತೆ ಮಾಡಿ ಜಯಗಳಿಸಿದ್ದರು.ಈ ಜಯದ ಭೀಮಾ ಕೊರೆಗಾಂವ್ ವಿಜಯೋತ್ಸವವಾಗಿದೆ.
ಜನವರಿ ೧ರಂದು ೨೦೫ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದು ಪ್ರಗತಿಪರ ಚಿಂತಕರು, ಸಮಾಜದ ಮುಖಂಡರು,ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುರಜ್ ಕುನಾಲ್,ಪ್ರಮೋದ್,ದಿನ್ನಿ ವೆಂಕಟೇಶ ಇದ್ದರು.