ಜ.೧೯: ರಾಘವೇಂದ್ರ ದಿ ವಾರಿಯರ್ ಚಿತ್ರದ ಟೀಸರ್ ಬಿಡುಗಡೆ

ರಾಯಚೂರು,ಜ.೧೭- ರಾಘವೇಂದ್ರ ದಿ ವಾರಿಯರ್ ಚಲನಚಿತ್ರದ ಹಾಡು ಮತ್ತು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಜನವರಿ ೧೯ ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಮರೇಗೌಡ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಪತ್ರಿಕಾ ಭವನದ ಸಭಾಂಗಣದಲ್ಲಿ ಸಂಜೆ ೫ ಗಂಟೆಗೆ ರಾಘವೇಂದ್ರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತದೆ. ಈ ಚಲನಚಿತ್ರದಲ್ಲಿ ನಾಯಕಿಯ ತಮ್ಮನ ಪಾತ್ರದಲ್ಲಿ ರಾಯಚೂರಿನ ರಾಂಪೂರನವರಾದ ಸೂರಿ ಕವಿ ಅವರು ನಟಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಚಲನಚಿತ್ರದ ಎಲ್ಲಾ ಚಿತ್ರ ತಂಡ ಭಾಗವಹಿಸಲಿದ್ದಾರೆ.ಅದೇ ರೀತಿ ಡಾ.ಪುನೀತ್ ರಾಜಕುಮಾರ್ (ಅಪ್ಪು) ಚಾರಿಟೇಬಲ್ ಟ್ರಸ್ಟ್ ರಾಯಚೂರು ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಎಲ್ಲಾ ಕಲಾವಿದರಿಗೆ ಸಹಕಾರ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಾಧಿಕ್ ಖಾನ್,ಅಮರೇಶ ಸಜ್ಜನ್,ರಾಜು ಇದ್ದರು.