ಜ.೧೮: ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ರಾಯಚೂರು,ಜ.೧೨- ಕರ್ನಾಟಕ ರಾಜ್ಯ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜನವರಿ ೧೮ ರಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ರಾಜ್ಯಾಧ್ಯಕ್ಷ ಡಿ. ಕೆಂಪಣ್ಣನವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಿ.ನಾಗಪ್ಪ ಗಿರಣಿ ಹೇಳಿದರು.
ಅವರಿಂದ ನಗರದ ಪತ್ರಿಕಾ ಭವನದಲ್ಲಿ ಸಿದ್ದುಗೋಷ್ಠಿ, ಉದ್ದೇಶಿಸಿ ಮಾತನಾಡಿ, ಕಳೆದ ಎರಡು ಮೂರು ವರ್ಷಗಳಿಂದ ಬಾಕಿ ಇರುವ ಗುತ್ತೇದಾರರ ಹಣ ಪಾವತಿಸಬೇಕು. ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ಜೇಷ್ಠತೆಯ ಆಧಾರದ ಮೇಲೆ ಹಣ ಪಾವತಿಸಬೇಕು. ಜನವರಿ ೧-೨೦೨೨ ರಿಂದ ಜಾರಿಯಾದ ಜಿ.ಎಸ್ ಟಿ ಶೇ ೧೮ ಆದರೂ ಇಂದಿಗೂ ಕೆಲ ಇಲಾಖೆಗಳಲ್ಲಿ ಶೇ ೧೨ ಜಿ.ಎಸ್.ಟಿ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಹಳಷ್ಟು ಕಾಮಗಾರಿಗಳನ್ನು ಟೆಂಡರ್ ಮಾಡಿದೇ ನಿರ್ಮಿತ ಕೇಂದ್ರ, ಕ್ಯಾಷಟೆಕ್ ಮತ್ತು ಇನ್ನಿತರ ಏಜೆನ್ಸಿಗಳಿಗೆ ಕಾಮಗಾರಿ ನೀಡುವುದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುವುದಲ್ಲದೇ ನಮ್ಮ ಲೈಸೆನ್ಸ್ ಕೂಡ ಮರು ನೋಂದಣಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಜನವರಿ ೧೮ ರಂದು ನಡೆಯುವ ಬೃಹತ್ ಪ್ರತಿಭಟನೆಗೆ ಜಿಲ್ಲೆಯ ಗುತ್ತೀಗೆದಾರರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ.ಮಲ್ಲಿಕಾರ್ಜುನ, ಬಿ.ಶ್ರೀನಿವಾಸರೆಡ್ಡಿ,ಎಂ.ಬಸವರಾಜ, ಸುರೇಶ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.