ಜ.೧೭ರಿಂದ ಪಲ್ಸ್ ಪೋಲಿಯೊ-ತಹಶೀಲ್ದಾರ

ಸಿಂಧನೂರು.ಜ.೫-ಕೊವಿಡ್ ೧೯ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೊ ಟಾಸ್ಕ್ ಫೋರ್ಸ್ ಸಮೀತಿ ಸಭೆ ತಹಶೀಲ್ದಾರ ಮಂಜುನಾಥ ಅಧ್ಯಕ್ಷತೆಯಲ್ಲಿ ತಹಶೀಲ್ ಕಛೇರಿಯಲ್ಲಿ ಇಂದು ಬೆಳಿಗ್ಗೆ ನಡೆಯಿತು.
ಜನವರಿ ೧೭ ರಿಂದ ೨೦ರ ತನಕ ರಾಷ್ಟ್ರೀಯ ಪಲ್ಸ್ ಪೊಲಿಯೊ ಕಾರ್ಯಕ್ರಮ ಪಡೆಯುತ್ತಿದ್ದು ಜನವರಿ ೧೬ ರಂದು ಸಮಾಜಿಕ ಅಂತರ ಕಾಪಾಡಿ ಕೊಂಡು ನಗರದಲ್ಲಿ ಜಾತ ಮಾಡುವ ಮೂಲಕ ಪೊಲಿಯೊ ಬಗ್ಗೆ ಜನರಲ್ಲಿ ಅರಿವು ಮಾಡಿಸಬೇಕು ಎಂದು ತಹಶೀಲ್ದಾರ ಮಂಜುನಾಥ ತಿಳಿಸಿದರು.
ಕೊವಿಡ್ ೧೯ ವ್ಯಕ್ಸೀನ್ ಬಂದಿದ್ದು ತಾಲ್ಲೂಕಿನಲ್ಲಿ ೨,೫೨೭ ಜನರಿಗೆ ವ್ಯಕ್ಸೀನ್ ನೀಡಲಾಗುತ್ತಿದ್ದು ಸಮಾಜಿಕ ಅಂತರ ಕಾಪಾಡುವ ಮೂಲಕ ಮೊದಲ ಹಂತದಲ್ಲಿ ೧೦೦ ಜನರಿಗೆ ವ್ಯಕ್ಸೀನ್ ನೀಡಲಾಗುವುದು ನಂತರ ಎರಡನೇ ಮತ್ತು ಮೂರನೇ ಹಂತದಲ್ಲಿ ವ್ಯಕ್ಸೀನ್ ನೀಡಲಾಗುತ್ತಿದ್ದು ವ್ಯಕ್ಸೀನ್ ನೀಡಿದ ವ್ಯಕ್ತಿಯನ್ನು ಅರ್ದ ಘಂಟೆ ತನಕ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಯಾವುದೇ ತೊಂದರೆ ಇಲ್ಲ ಎಂದು ಕಂಡು ಬಂದಾಗ ನಂತರ ಮನೆಗೆ ಕಳುಹಿಸಿ ಕೊಡಲಾಗುವುದು ಕೊವಿಡ್ ೧೯ ವ್ಯಕ್ಸೀನ್ ನೀಡುವುದನ್ನು ಅಧಿಕಾರಿಗಳು ಚುನಾವಣೆ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ಗ್ರಾಮ ಪಂಚಾಯತಿಗಳು ಗ್ರಾಮಗಳಲ್ಲಿ ಢಂಗೂರ ಹಾಕಿಸಿ ಅಲ್ಲದೆ ಮೈಕ್‌ಗಳ ಮುಖಾಂತರ ಪೊಲಿಯೊ ಕಾರ್ಯಕ್ರಮದ ಜನರಲ್ಲಿ ಪ್ರಚಾರ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಇ.ಓಗೆ ಸೂಚನೆ ನೀಡಿದ ಅವರು ಕೆ.ಎಸ್.ಆರ್.ಟಿ.ಸಿಗಳಲ್ಲಿ ಸ್ವಲ್ಪ ಸಮಯ ಬಸ್ಸಗಳನ್ನು ನಿಲ್ಲಿಸಿ ಬಸ್ಸನಲ್ಲಿ ಇದ್ದ ಮಕ್ಕಳಿಗೆ ಪೊಲಿಯೊ ಹಾಕಿಸಿಯುವ ವ್ಯವಸ್ಥೆ ಸಾರಿಗೆ ಅಧಿಕಾರಿಗಳು ಮಾಡಬೇಕು ಎಂದರು.
ತಾಲ್ಲೂಕಿನಲ್ಲಿ ೪೫,೩೨೩ ಮಕ್ಕಳಿಗೆ ಪೊಲಿಯೊ ಹನಿ ಹಾಕಲಾಗುತ್ತಿದ್ದು ೨೪೮ ಬೂತಗಳನ್ನು ಮಾಡಿದ್ದು ೫೩ ಜನ ಸುಪರವೇಜರ್‌ಗಳು ಹಾಗು ೧೨ ತಂಡ ಗಳಿದ್ದು ಆಸ್ಪತ್ರೆ ವೈಧ್ಯಾಧಿಕಾರಿಗಳು ಪೊಲಿಯೊ ಕಾರ್ಯಕ್ರಮದ ಮೇಲ ಉಸ್ತುವಾರಿಗಳಾಗಿ ಕೆಲಸ ಮಾಡುತ್ತಿದ್ದು ನಗರ ಸಭೆ ವತಿಯಿಂದ ಊಟದ ವ್ಯವಸ್ಥೆ ಮಾಡಬೇಕು ಎಂದು ತಾಲ್ಲೂಕು ವೈಧ್ಯಾಧಿಕಾರಿ ನಂದ ಕುಮಾರ್ ಸಭೆಯಲ್ಲಿ ಮಾತನಾಡಿದರು.
ಜನವರಿ ೧೭ ರಂದು ಬೂತ್‌ಗಳಲ್ಲಿ ಮಕ್ಕಳಿಗೆ ಪೊಲಿಯೊ ಹಾಕಿ ನಂತರ ಮನೆ ಮನೆಗೆ ತೆರಳಿ ಪೊಲಿಯೊ ಹನಿ ಹಾಕಲಾಗುವುದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿ ರಾಷ್ಟ್ರೀಯ ಪಲ್ಸಾರ್ ಪೊಲಿಯೊ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕು ಎಂದು ಡಾ.ನಂದ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಹಾಗು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು ಹಾಗು ವಿವಿಧ ಇಲಾಖೆ ಗಳ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು ಹಿರಿಯ ಆರೋಗ್ಯ ಸಹಾಯಕ ರಂಗನಾಥ ಗುಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.