ಜ.೧೫ ರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ದಾವಣಗೆರೆ.ಜ.೧೨; ಹೋಮಿಯೋಪಥಿ ವೈದ್ಯಕೀಯ ಸಂಘ ದಾವಣಗೆರೆ ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಜ.೧೫ ರಿಂದ  ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಾ. ಎ.ಎನ್. ಸುಂದರೇಶ್  ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‌ ಎಂಸಿಸಿ   ಬಿ ಬ್ಲಾಕ್ ನ ಮಾಮಾಸ್ ಜಾಯಿಂಟ್ ರೋಡ್, ಮೂರನೇ ಮುಖ್ಯ ರಸ್ತೆ, ಮೂರನೇ ಅಡ್ಡ ರಸ್ತೆ, ಶಂಕರ್ ಪ್ಲಾಜಾದಲ್ಲಿರುವ ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಲ್ಲಿ  ಪ್ರತಿ ತಿಂಗಳ ಮೊದಲನೇ ಮತ್ತು ೩ ರ  ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೧ ರವರೆಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಶಿಬಿರದಲ್ಲಿ ಹೋಮಿಯೋಪಥಿ ವೈದ್ಯಕೀಯ ಸಂಘದ  ಎಲ್ಲಾ ವೈದ್ಯರುಗಳು ಪಾಲ್ಗೊಳ್ಳಲಿದ್ದು, ಎಲ್ಲಾ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡಲಾಗುವುದು.  ಆರ್ಥಿಕವಾಗಿ ಹಿಂದುಳಿದವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.ಶಿಬಿರವನ್ನು ಜ.೧೫ ಸಂಕ್ರಾಂತಿಯಂದು ಉದ್ಘಾಟಿಸಲಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕರುಣಾದ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಡಾ. ಮಾವಿಶೆಟ್ಟರ್, ಡಾ. ಜಿ.ಎಸ್. ಗಿರೀಶ್, ಡಾ. ಶ್ರೀಧರ್, ಡಾ. ಪ್ರಭುದೇವ್ ಇನ್ನಿತರರಿದ್ದರು.