ಜ.೧೪ ರಿಂದ ಅನುದಾನಿತ ನೌಕರರ ಅಹೋರಾತ್ರಿ ಧರಣಿ

ರಾಯಚೂರು, ಜ.೧೧- ಪಿಂಚಣಿ ವಂಚಿತರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿಯಲ್ಲಿ ತೊಡಗಿ ೯೩ ದಿನಗಳು ಗತಿಸಿವೆ.ಈಗ ನೂರನೇ ದಿನ ಅಂದರೆ ಸಂಕ್ರಮಣದ ದಿನ ಪಿಂಚಣಿ ವಂಚಿತ ನೌಕರರು ಕುಟುಂಬ ಸಹಿತ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮೊದಲು ಮಾಡಲಾಗುವುದೆಂದು ಸರಕಾರಿ ಅನುದಾನಿತ ಪಿಂಚಣಿ ವಂಚಿತರ ನೌಕರರರ ಸಂಘದ ರಾಜ್ಯ ಉಪಾಧ್ಯಕ್ಷ ಪಂಪಾಪತೆಪ್ಪ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,೨೦೦೬ ರಿಂದ ನೇಮಕಗೊಂಡ ಸರಕಾರಿ ನೌಕರರಿಗೆ ಪಿಂಚಣಿ ಇಲ್ಲದಿರುವುದರಿಂದ ಸಂಕಷ್ಟ ಎದುರಾಗಿದ್ದು ನಮ್ಮ ನ್ಯಾಯಯುತವಾದ ಬೇಡಿಕೆ ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು. ಈ ವರೆಗೂ ಸರಕಾರ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದಿರುವುದು ಈಗ ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಲಾಗುವುದೆಂದು ತಿಳಿಸಿದರು.
ಜಿಲ್ಲಾಧ್ಯಕ್ಷ ವಿಜಯಕುಮಾರ ಮಾತನಾಡಿ ಸಂಕ್ರಾಂತಿಯಂದು ಕ್ರಾಂತಿ ರೀತಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರತಿಭಟನೆಗಿಳಿಯಲಾಗುವುದು. ಕ್ರಮೇಣ, ಸರದಿ ಉಪವಾಸ, ಆಮರಣ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.