ಜ.೧೨ :ಬಿಜೆಪಿ ಜನ ಸೇವಾ ಸಮಾವೇಶ -ರಾಮನಂದ ಯಾದವ್

ರಾಯಚೂರು. ಜ.೧೦.ಮುಂದಿನ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪೂರ್ವ ತಯಾರಿಗಾಗಿ ಜನ ಸೇವಾ ಸಮಾವೇಶವನ್ನು ಜ.೧೨ ರಂದು ಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮನಂದ ಯಾದವ ಅವರು ಹೇಳಿದರು.
ಅವರಿಂದು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗರೊಂದಿಗೆ ಮಾತನಾಡುತ್ತ ರಾಜ್ಯ ಬಿಜೆಪಿ ಪಕ್ಷದ ರಾಜ್ಯ ಘಟಕದ ವತಿಯಿಂದ ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಯನ್ನು ಗುರಿಯಾಗಿಟ್ಟುಕೊಂಡು ಜನ ಸೇವಾ ಸಮಾವೇಶವನ್ನು ನಗರದ ಅರ್ಷಿತ ಗಾರ್ಡನ್ ಸಭಾಂಗಣದಲ್ಲಿ ಜ.೧೨ ರಂದುಅಮ್ಮಿಕೊಳ್ಳಲಾಗಿದೆ.
ಈ ಸಮಾವೇಶವು ರಾಜ್ಯಾದ್ಯಂತ ಜ.೧೧ ರಿಂದ ೧೩ ರ ವರೆಗೆ ನಡೆಯಲಿದೆ ಸಮಾವೇಶವನ್ನು ನಡೆಸಲು ೫ ತಂಡಗಳನ್ನು ರಚಿಸಲಾಗಿದೆ ಜ.೧೧ ರಂದು ಬೀದರ್,ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆಯಲಿದ್ದು,೧೨ ರಂದು ಯಾದಗಿರಿ ಮತ್ತು ರಾಯಚೂರು ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಈಗಾಗಲೇ ಗ್ರಾ.ಪಂ.ಚುನಾವಣೆಯಲ್ಲಿ ಗೆಲವು ಸಾಧಿಸಿದ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಲದ್ ಜೋಶಿ, ಸಚಿವರಾದ ಜಗದೀಶ್ ಶೆಟ್ಟರ್, ಪ್ರಭು ಚೌಹಾಣ್, ಶಶಿಕಲಾ ಜೊಲ್ಲೆ ಹಾಗೂ ಸಂಸದರು, ನಗರ ಶಾಸಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತು ಸದಸ್ಯ ಎನ್.ಶಂಕ್ರಪ್ಪ,ಶಾಸಕ ಡಾ.ಎಸ್. ಶಿವರಾಜ ಪಾಟೀಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯು. ದೊಡ್ಡ ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.