ಜ. ಅಂತ್ಯಕ್ಕೆ ಲಸಿಕೆ ಸಾಧ್ಯತೆ

ನವದೆಹಲಿ,ನ.೯- ಕೊರೊನಾ ಸೋಂಕಿಗೆ ಲಸಿಕೆ ಅಭಿವೃದ್ಧಿಯಾಗುತ್ತಿದ್ದು ಮುಂದಿನ ವರ್ಷ ಜನವರಿ ಅಂತ್ಯದೊಳಗೆ ದೇಶದಲ್ಲಿ ಲಸಿಕೆ ಸಿಗುವ ಸಾಧ್ಯತೆಗಳಿವೆ ಎಂದು ಭಾರತೀಯ ಸೆರಂ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

ಪುಣೆ ಮೂಲದ ಜಗತ್ತಿನ ಅತಿ ದೊಡ್ಡ ಔಷಧ ತಯಾರಿಕಾ ಸಂಸ್ಥೆಯಾದ ಭಾರತೀಯ ಸೆರಂ ಸಂಸ್ಥೆ ಕರೋನಾ ಲಸಿಕೆಯನ್ನು ಆಸ್ಟ್ರಾ ಜನಕ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಭಾರತೀಯ ಸೆರಂ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲಾ ಅವರು ಜನವರಿ ಅಂತ್ಯದೊಳಗೆ ಭಾರತದಲ್ಲಿ ಲಸಿಕೆ ಸಿಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಔಷಧ ನಿಯಂತ್ರಣಾ ಸಂಸ್ಥೆ ಲಸಿಕೆ ಅಭಿವೃದ್ಧಿಗೆ ಅನುಮತಿ ನೀಡುತ್ತಿದ್ದಂತೆ ನಾವು ಅದನ್ನು ವ್ಯಾಪಕ ಪ್ರಮಾಣದಲ್ಲಿ ಉತ್ಪಾದಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಷ್ಟಾಜೆನಕ ಸಂಸ್ಥೆ ಅಭಿವೃದ್ಧಿಪಡಿಸಿರುವ ಗೊರವನ ರಸ್ತೆಯ ಎರಡು ಮತ್ತು ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ ಅದು ಯಶಸ್ವಿಯಾದ ನಂತರ ಭಾರತೀಯ ನಿಯಂತ್ರಣ ಸಂಸ್ಥೆ ಲಸಿಕೆಯ ಅಭಿವೃದ್ಧಿಗೆ ಅನುಮತಿ ನೀಡಬೇಕಾಗುತ್ತದೆ ಅನುಮತಿ ನೀಡಿದ ತಕ್ಷಣವೇ ನಾವು ಲಸಿಕೆ ಉತ್ಪಾದಿಸುತ್ತೇವೆ ಎಂದು ಹೇಳಿದ್ದಾರೆ.

ವಿಶ್ವದಾದ್ಯಂತ ೪೫ಕೊರೊನಾ ಸೋಂಕಿನ ಲಕ್ಷಣಗಳು ಮಾನವರ ಮೇಲೆ ಪ್ರಯೋಗ ನಡೆಯುತ್ತಿವೆ ಅದರಲ್ಲಿ ಯಾವುದು ಮೊದಲು ಯಶಸ್ವಿಯಾಗುತ್ತದೆ ಅದನ್ನ ಅಭಿವೃದ್ಧಿಪಡಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ನಂತರ ಅದರ ಸಂಗ್ರಹಣೆ ಪೂರೈಕೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾಗುತ್ತದೆ ನಮ್ಮದೇನಿದ್ದರೂ ಲಸಿಕೆಯನ್ನು ಉತ್ಪಾದಿಸುವುದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವುದನ್ನು ಎದುರುನೋಡುತ್ತಿದ್ದೇವೆ ಅನುಮತಿ ನೀಡಿದ ತಕ್ಷಣ ನಾವು ನಮ್ಮ ಕೆಲಸವನ್ನು ಆರಂಭಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ