ಜ್ವಲಂತ ಸಮಸ್ಯೆ ಬಗೆಹರಿಸದೆ ಬೀದರ ಉತ್ಸವ ಮಾಡುವ ನಿರ್ಣಯಕ್ಕೆ ಖಂಡನೆ

ಬೀದರ:ನ.23:ಕಳೆದ 146 ದಿವಸಗಳಿಂದ ಬೀದರ ಉಸ್ತುವಾರಿ ಸಚಿವರ ಕಛೇರಿಯ ಮುಂಭಾಗದಲ್ಲಿ ಕಾರಂಜಾ ಸಂತ್ರಸ್ಥ ರೈತರು ತಾವು ಕಾರಂಜಾ ಜಲಾಶಯಕ್ಕಾಗಿ ಕಳೆದುಕೊಂಡ ಜಮಿನು ಹಾಗೂ ಮನೆಗಳ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಸರ್ವವಿದಿತವಾಗಿದೆ. 28 ಹಳ್ಳಿಗಳ ಸುಮಾರು 50 ಸಾವಿರ ಜನರು ಕಾರಂಜಾ ಜಲಾಶಯದಿಂದ ಪ್ರಭಾವಿತರಾಗಿದ್ದು, ಕಷ್ಟದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಅಂದಿನಿಂದ ಇಂದಿನ ವರೆಗೆ ಎಲ್ಲಾ ಪಕ್ಷಗಳ ನಾಯಕರುಗಳು, ಜಿಲ್ಲೆಯ ಜನ ಪ್ರತಿನಿಧಿಗಳು, ಅಧಿಕಾರಿಗಳು, ಹಿಗೆ ಎಲ್ಲಾ ಸನ್ಮಾನ್ಯರೀಗೆ ಮನವಿಗಳ ಸುರಿಮಳೆ ಮಾಡುತ್ತಿದ್ದು, ಅವರುಗಳ ಮನೆಗಳಿಗೆ ಖುದ್ದಾಗಿ ಭೇಟಿಯಾಗಿದ್ದು, ಮಾನ್ಯ ಮುಖ್ಯ ಮಂತ್ರಿಗಳಿಗೆ ಎರಡು – ಮೂರು ಸಲ ಖುದ್ದಾಗಿ ಭೆಟಿಯಾಗಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನಯಾಗಿಲ್ಲ. ಮಾನ್ಯ ಮುಖ್ಯ ಮಂತ್ರಿಗಳು ಈ ಹಿಂದೆ ನಡೆದ ಸದನದ ವಿಶೇಷ ಅಧಿವೇಶನದಲ್ಲಿ ಸಕಾರಾತ್ಮಕವಾದ ಹೇಳಿಕೆಯನ್ನು ನೀಡಿದ್ದರೂ ಯಾವುದೇ ಕೆಲಸ ಆಗದೆ ಇರುವುದು ದುಖಃದ ಸಂಗತಿಯಾಗಿದೆ.

ಬೀದರ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿವೆ. ಮುಖ್ಯವಾಗಿ ಕಾರಂಜಾ ಸಂತ್ರಸ್ಥರು ನಡೆಸುತ್ತಿರುವ 146 ದಿವಸಗಳ ಅಹೋ ರಾತ್ರಿ ಧರಣಿ. ಕಬ್ಬು ಬೆಳೆಗಾರರಿಗೆ ಪ್ರತಿ ಟನ್ನಿಗೆ ರೂ. 2500/- ರಂತೆ ಘೋಷಣೆ ಮಾಡಿದರೂ ಕೆವಲ 2000/- ನೀಡಿದ್ದಾರೆ. ಸಕ್ಕರೆ ಸಚಿವರಾಗಿದ್ದ ಜಿಲ್ಲೆಯ ಉಸ್ತುವಾರಿ ಸಚಿವರು ಕಬ್ಬಿನ ಬೆಲೆಯನ್ನು ನಿಗದಿಪಡಿಸಿಲ್ಲ.ಕಛೇರಿಯ ಮುಂಭಾಗದಲ್ಲಿ ಧರಣಿ ನಿರತ ಸಂತ್ರಸ್ಥರನ್ನು ಉಸ್ತುವಾರಿ ಸಚಿವರು ನೋಡಿಲ್ಲ. ಪಶು ಸಂಗೋಪನೆ ಸಚಿವರಾದ ಪ್ರಭು ಚೌಹ್ವಾಣ ರವರು ಕಾರಂಜಾ ಸಂತ್ರಸ್ಥರ ಕಡೆಗೆ ಕಣ್ಣೆತ್ತಿ ನೋಡದೆ ಕೆವಲ ಔರಾದ ತಾಲೂಕಿಗೆ ಕುಡಿಯುವ ನೀರು ತರಲು ಹೋರಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಧರಣಿ ನಿರತ ಸ್ಥಳದ ಮುಂಭಾಗದಿಂದ ದಿನಾಲು ಅಡ್ಡಾಡುತ್ತಿರುತ್ತಾರೆ. ರೈತರ ಕಡೆಗೆ ಲಕ್ಷವನ್ನು ಸಹ ಹಾಕುವುದಿಲ್ಲ. ಸಂಪೂರ್ಣ ಬೀದರ ನಗರದ ರಸ್ತೆಗಳು ಹಾಳಾಗಿ ಹೋಗಿ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೂ ಅವುಗಳನ್ನು ದುರಸ್ತಿ ಮಾಡುತ್ತಿಲ್ಲ. 8. ಆಶ್ವಾಸನೆ ನೀಡಲಾಗಿದ್ದರೂ ಬಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೆತನ ಗೊಳಿಸಲು ಹಣಕಾಸಿನ ನೆರವು ನೀಡಿರುವುದಿಲ್ಲ.

ಕಾರಂಜಾ ಮುಳುಗಡೆಯ 28 ಹಳ್ಳಿಗಳ ಪೈಕಿ ಔರಾದ ಎಸ್ ಅಥವಾ ಖೇಣಿ ರಂಜೋಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ನಡೆಸಲು ಕೋರಲಾಗಿದೆ

ಬೀದರ ಉತ್ಸವ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಇದ್ದರೂ ಇವುಗಳ ಪರಿಹಾರದ ಗೊಜಿಗೆ ಹೋಗದೆ ಬೀದರ ಉತ್ಸವವನ್ನು ಮಾಡುವುದರ ಔಚಿತ್ಯವೇನು? ಯಾರಿಗೆ ಲಾಭ ಮುಟ್ಟಿಸುವುದಕೋಸ್ಕರ ಅಥವಾ ಯಾರಿಗೆ ಖುಷಿ ಪಡಿಸುವುದಕೋಸ್ಕರ ಬೀದರ ಉತ್ಸವ ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ?

ಈ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ನಾಗಶೆಟ್ಟಪ್ಪ ಹಚ್ಚಿ, ವೀರಭದ್ರಪ್ಪ ಉಪ್ಪಿನ, ಭೀಮರೆಡ್ಡಿ, ಮಹೇಶ, ಶಾಮಣ್ಣ ಬಾವಗಿ, ಕಲ್ಯಾಣರಾವ ಚನಶೇಟ್ಟಿ, ಮಾದಪ್ಪ ಖೌದೆ, ಬಾಬುರಾವ ಹಜ್ಜರ್ಗಿ, ಶಂಕರರಾವ ಮನ್ನಳ್ಳಿ ಮುಂತಾದವರು ಹಾಜರಿದ್ದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು.