೧. ಮಲೇರಿಯಾ: ಜ್ವರ ಬಂದಾಗ ೧ ಲೀಟರ್ ನೀರಿಗೆ ೧ ನಿಂಬೆ ಹಣ್ಣಿನ ರಸವನ್ನು ಹಿಂಡಿ ಚೆನ್ನಾಗಿ ಕುದಿಸಿ ಅರ್ಧ ಲೀಟರ್ ಆದ ನಂತರ, ಇಳಿಸಿ, ಶೋಧಿಸಿ, ಅದಕ್ಕೆ ತಾಜಾ ಈರುಳ್ಳಿ ರಸ ಸೇರಿಸಿ ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಕುಡಿಯುತ್ತಾ ಬಂದರೆ, ಮಲೇರಿಯಾ ಗುಣವಾಗುವುದು.
೨. ಎಲ್ಲಾ ರೀತಿಯ ಜ್ವರಕ್ಕೆ ರಾಮಬಾಣ: ಬೇವಿನಕಡ್ಡಿಗಳನ್ನು ಅಥವಾ ತೊಗಟೆಯನ್ನು ತಂದು ಜಜ್ಜಿದ ಹಾಗೆ ಮಾಡಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಅರ್ಧಾಂಶ ಆದ ನಂತರ, ಇಳಿಸಿ, ಆರಿದ ನಂತರ ಶೋಧಿಸಿಕೊಂಡು ತೆಗೆದಿಟ್ಟುಕೊಳ್ಳಿ. ಪ್ರತಿದಿನ ಬೆಳಿಗ್ಗೆ, ಮದ್ಯಾಹ್ನ, ರಾತ್ರಿ ೩ ಬಾರಿ ಇದನ್ನು ಕುಡಿಯುತ್ತಾ ಬಂದರೆ ೩ ದಿನದಲ್ಲಿ ಎಂತಹ ಜ್ವರವಾದರೂ ಗುಣವಾಗುತ್ತದೆ.
೩. ಅಮೃತಬಳ್ಳಿಯಲ್ಲಿ ಎಲ್ಲಾ ರೀತಿಯ ಜ್ವರವನ್ನು ಹತೋಟಿಗೆ ತರುವ ಶಕ್ತಿ ಇದೆ. ಒಂದು ಬಾರಿಗೆ ಒಂದು ಸಣ್ಣ ತುಂಡಿನಷ್ಟು ಬಳ್ಳಿಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಜಜ್ಜಿಕೊಳ್ಳಿ. ಇದನ್ನು ೧ ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಅರ್ಧ ಇಂಗಿದ ನಂತರ ಶೋಧಿಸಿಕೊಂಡು ಹಾಲು, ಸಕ್ಕರೆ ಹಾಕಿ ಕುಡಿಯಿರಿ. ಈ ರೀತಿ ೩ ದಿನ, ೩ ಹೊತ್ತು ಸೇವಿಸಿದರೆ ಜ್ವರ ಉಪಶಮನವಾಗುತ್ತದೆ.
೪. ತುಳಸಿ ಎಲೆಯನ್ನು ಚೆನ್ನಾಗಿ ತೊಳೆದು ರಸ ತೆಗೆದುಕೊಳ್ಳಿ. ೨ ಚಮಚದಷ್ಟು ರಸಕ್ಕೆ ೨ ಚಿಟಿಕೆ ಕರಿಕಾಳುಮೆಣಸಿನಪುಡಿ ಸೇರಿಸಿ ಸೇವಿಸಿ (೩ ದಿನಗಳು ೨ ಹೊತ್ತು).
೫. ತುಂಬೆ ಎಲೆಯ ರಸಕ್ಕೆ ಕಾಳುಮೆಣಸಿನಪುಡಿ ಸೇರಿಸಿ, ಸೇವಿಸಿ (೩ ದಿನಗಳು ೨ ಬಾರಿ)
೬. ಮಲೇರಿಯಾ ಜ್ವರಕ್ಕೆ: ಪಪ್ಪಾಯಿ ಗಿಡದ ಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ಉಪ್ಪಿನಕಾಯಿ ಹಾಕುವಂತೆ ಉಪ್ಪಿನಲ್ಲಿ ಮುಳುಗಿಸಿಡಿ. ೨ ದಿನಗಳ ನಂತರ ಬೆಳಿಗ್ಗೆ, ಸಂಜೆ ೪-೪ ಹೋಳುಗಳನ್ನು ತಿನ್ನುತ್ತಾ ಬಂದರೆ ಮಲೇರಿಯಾ ಜ್ವರ ಕಡಿಮೆಯಾಗುವುದು.
೭. ಆಗ್ಗಿಂದ್ದಾಗ್ಗೆ ಬರುವ ಜ್ವರಕ್ಕೆ: ಅರಿಶಿನದ ಕೊಂಬು ಹಾಗೂ ಜೀರಿಗೆ ಎರಡನ್ನು ಮನೆಯಲ್ಲಿಯೇ ಪುಡಿಮಾಡಿ ಸಮಪ್ರಮಾಣ ಬೆರೆಸಿಟ್ಟುಕೊಳ್ಳಿ. ಅರ್ಧ ಚಮಚ ಪುಡಿಯನ್ನು ಬಿಸಿನೀರಿನಲ್ಲಿ ಕದಡಿ ಕುಡಿಯಿರಿ. (೩ ದಿನ ೨ ಬಾರಿ)
೮. ಕೊತ್ತಂಬರಿ ಬೀಜ ಹಾಗೂ ಶುಂಠಿ ಹಾಕಿ ಕಷಾಯ ಮಾಡಿ ಕುಡಿದರೆ ಆಗತಾನೇ ಬಂದಿರುವ ಜ್ವರ ನಿವಾರಣೆಯಾಗುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.