ಜ್ವರದಿಂದ ಬಳಲುತ್ತಿರುವ ವ್ಯಾಸಗೊಂಡನಹಳ್ಳಿ ಗ್ರಾಮಕ್ಕೆ ಶಾಸಕರ ಭೇಟಿ

ಜಗಳೂರು.ಜು.೨೨; ಇಲ್ಲಿನ ವ್ಯಾಸಗೊಂಡನಹಳ್ಳಿ ಗ್ರಾಮಕ್ಕೆ ಶಾಸಕ ಎಸ್ ವಿ ರಾಮಚಂದ್ರ ಭೇಟಿ ಜ್ವರದಿಂದ ಬಳಲುವಂತ ಜನರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ  ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರಗಳಿಂದ ಜನರಿಗೆ ಜ್ವರ ಬಂದು ಕೈಕಾಲು ನೋವು ಸೊಂಟ ನೋವು   ಕಾಣಿಸಿಕೊಂಡು ಜನರು ಹಾಸಿಗೆ ಹಿಡಿದಿದ್ದರು ಇದೀಗ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ಸಿಬ್ಬಂದಿ  ಗ್ರಾಮದ ಸಮುದಾಯ ಭವನದಲ್ಲಿ ಜನರ ಅರೋಗ್ಯ ಸುಧಾರಿಸಲು ಸ್ಥಳದಲ್ಲಿಯೇ ಟೆಂಟ್ ಹಾಕಿ ತಪಾಸಣೆ ನಡೆಸಿ ಚಿಕಿತ್ಸೆ ಸೌಲಭ್ಯ ನೀಡಲು ಮುಂದಾಗಿದ್ದಾರೆ. ಗ್ರಾಮಕ್ಕೆ ಶಾಸಕ ಎಸ್ ವಿ ರಾಮಚಂದ್ರ ಮತ್ತು ವೈಧ್ಯಾಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ  ಭೇಟಿ ನೀಡಿ ಸೂಕ್ತ ಚಿಕಿತ್ಸೆ ಸೌಲಭ್ಯಗಳುನ್ನು  ನೀಡುವಂತೆ ತಿಳಿಸಿದರು.ನಂತರ ಗ್ರಾಪಂ ಪಿ.ಡಿ.ಒ ರವರಿಗೆ ತರಾಟೆ ತೆಗೆದುಕೊಂಡರು‌ ಗ್ರಾಮಗಳಿಗೆ ಭೇಟಿ ನೀಡಿ ಚರಂಡಿ ಸ್ವಚತೆ ಸೇರಿದಂತೆ ವಿವಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ತಿಳಿಸಿದರು ಅರೋಗ್ಯ ಇಲಾಖೆ ಅಧಿಕಾರಿಗಳು ಸಹ‌ ಗ್ರಾಮಿಣ ಜನರಿಗೆ ಸೂಕ್ತ ಔಷಧಿ ಚುಚ್ಚುಮದ್ದು ನೀಡುವುದರ ಮೂಲಕ ಪದೇ ಪದೇ ಜ್ವರ   ಕೈಕಾಲು ನೋವು ಮತ್ತು ನೆಗಡಿ ಕೆಮ್ಮು ಕಾಣಿಸಿಕೊಂಡ ಹಿನ್ನಲೆಯನ್ನು ಪತ್ತೆ ಹಚ್ಚಲು ರೋಗಿಗಳ ರಕ್ತ ಪರೀಕ್ಷೆಗೊಳ ಪಡಿಸಿ ಸೂಕ್ತ ಚಿಕಿತ್ಸೆ ನೀಡುವಂತೆ  ವೈಧ್ಯಾಧಿಕಾರಿ ಸಿಬ್ಬಂದಿಗೆ ಶಾಸಕರು ಚುರುಕು ಮುಟ್ಟಿಸಿದರು.ಈ ಹಿಂದೆ  ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು  ಸಹ ಭೇಟಿ ನೀಡಿ ಸ್ವಚತೆ ಬಗ್ಗೆ ಜಾಗೃತಿ ಮೂಡಿಸಲಾಗಿತ್ತುಕಳೆದ ದಿನಗಳ ಹಿಂದೆ ಅತಿ ಹೆಚ್ಚು ಮಳೆ ಬಂದು ಕುಡಿಯುವ ನೀರಿನ  ಬೋರ್ವೆಲ್ ನಲ್ಲಿ ಕಲುಷಿತ ಕಲ ಬರಕೆ ಗಬ್ಬು ನೀರು ಮಿಶ್ರಣವಾಗಿತ್ತು .ಆದರೆ ಇದೀಗ ಗ್ರಾಪಂ ಇಲಾಖೆಯವರು ಹೊಸ ಮೋಟರ್ ಪೈಪುಗಳನ್ನು ಅಳವಡಿಸಿ ಕುಡಿಯುವ ನೀರು ಒದಗಿಸಿ ಚರಂಡಿ ಸ್ವಚಗೊಳಿಸಿ ಗ್ರಾಮದಲ್ಲಿ ಬ್ಲೀಚಿಂಗ್   ಪೌಡರ್ ಸಿಂಪಡಿಸಲಾಗಿದೆ…ಗ್ರಾಮದಲ್ಲಿ  ಅಧಿಕಾರಿಗಳ ತಂಡ ಬೀಡು ಬಿಟ್ಟು ಜ್ವರ ಕೈಕಾಲು ನೋವು .ನೆಗಡಿ ಕೆಮ್ಮುನಿಂದ ಬಳಲುತ್ತಿರುವ ಸುಮಾರು 5೦ ಕ್ಕೂ ಹೆಚ್ಚು ಜನರು ತಪಾಸಣೆಯಲ್ಲಿ   ಪಾಲ್ಗೊಂಡು ಚಿಕಿತ್ಸೆ ಪಡೆದರು ಗ್ರಾಮದಲ್ಲಿ ಯಾವುದೇ ಗಂಭೀರವಾದ ಸಮಸ್ಯೆ ಮತ್ತು ಸಾವು ಕಂಡುಬಂದಿಲ್ಲ  ಎಂದು  ‌ಟಿ ಎಚ್ ಓ ನಾಗರಾಜ್ ಮಾಹಿತಿ‌ ನೀಡಿದರು..

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್

ಬಿಸ್ತುವಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಬಾಬು ಆರೋಗ್ಯ ಸಲಹಾ ಸಮಿತಿ ಸದಸ್ಯ ಪೂಜಾರ್  ಸಿದ್ದಪ್ಪ.ಗ್ರಾಪಂ ಸದಸ್ಯ‌ ಕೃಷ್ಣಪ್ಪ.ಪರಶುರಾಮ.ಗ್ರಾಮದ ಮುಖಂಡ ಕಂಪಳೇಶ್.  . ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ತಾಲೂಕು ಆರ್.ಬಿ.ಎಸ್.ಕೆ ತಂಡ ವೈದ್ಯಾಧಿಕಾರಿ ಸಿಬ್ಬಂದಿ ಸೇರಿದಂತೆ ನಿರೀಕ್ಷಣ ಅಧಿಕಾರಿ ಅಮೃತೆಶ್ವರ ಸ್ವಾಮಿ. ಶ್ರೀಧರ್. ಸಮುದಾಯ ಆರೋಗ್ಯ ಅಧಿಕಾರಿ. ಮಾರ್ಸಿ. ಮೋಹನ್.ಕಾವ್ಯ.ಪ್ರಯೋಗ ಶಾಲಾ ತಂತ್ರಜ್ಞಾನ ಅಧಿಕಾರಿ ತಿಪ್ಪೇಸ್ವಾಮಿ. ಭಾಗವಹಿಸಿದ್ದರು.