ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ಮನವಿ

ದಾವಣಗೆರೆ, ಜೂ.೨- ರಾಜ್ಯ ಸರ್ಕಾರಿ ನೌಕರರುಗಳಿಗೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಕರ್ನಾಟಕ ಸರ್ಕಾರವು ಈಗಾಗಲೇ ಜಾರಿಗೊಳಿಸಿದೆ. ಆದರೆ, ಸ್ಥಳೀಯ ಸಂಸ್ಥೆಗಳಾದ ಪುರ,ನಗರಸಭೆ, ಮಹಾನಗರ ಪಾಲಿಕೆಗಳ ಅಧಿಕಾರಿ,ನೌಕರರುಗಳಿಗೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿರುವುದಿಲ್ಲ. ಸರ್ಕಾರಿ ನೌರಕರರುಗಳಿಗೆ ಜಾರಿಗೊಳಿಸುವ ಎಲ್ಲ ಆದೇಶಗಳೂ ಸ್ಥಳೀಯ ಸಂಸ್ಥೆಯ ನೌಕರರುಗಳಿಗೆ ಅನ್ವಯಿಸುತ್ತಿದ್ದು, ಸ್ಥಳೀಯ ಸಂಸ್ಥೆಗಳ ನೌಕರರುಗಳಿಗೆ ನೇಮಕಾತಿ ಮಾಡುವುದು ವರ್ಗಾವಣೆ ಮಾಡುವುದು ಹಾಗೂ ಕೆ.ಸಿ.ಎಸ್.ಆರ್ ಮತ್ತು ಸಿ.ಸಿ.ಎ. ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಆದ್ದರಿಂದ ಜಾರಿಗೊಳಿಸಬೇಕೆಂದು ಮಹಾನಗರ ಪಾಲಿಕೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಗೋವಿಂದರಾಜು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿರುವ ಸ್ಥಳೀಯ ಸಂಸ್ಥೆಗಳ ಅಧಿಕಾರಿ, ನೌಕರರು ಕೋವಿಡ್ -19 ನಿರ್ವಹಣೆಯಲ್ಲಿ ಸರ್ಕಾರದಿಂದ ಕಾಲ ಕಾಲಕ್ಕೆ ಸೂಚಿಸಿ ಆದೇಶಿಸಿರುವ ಪ್ರಕಾರ ಸಾರ್ವಜನಿಕರಿಗೆ ಅತ್ಯಗತ್ಯ ಸೇವೆಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳಿಗೆ ಅತೀ ಹೆಚ್ಚು ಕಾಯಿಲೆಗಳು ಬರುತ್ತಿದ್ದು ಮತ್ತು ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದುತ್ತಿರುವುದು ಹೆಚ್ಚಾಗಿರುತ್ತದೆ.  ನಗರವನ್ನು ಸ್ವಚ್ಛಗೊಳಿಸಲು ಅವಿರತವಾಗಿ ತಲ್ಲೀನರಾಗಿ ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದಕಾರಣ, ಸ್ಥಳೀಯ ಸಂಸ್ಥೆಗಳಾದ ಪುರ,ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ಅಧಿಕಾರಿ,ನೌಕರರುಗಳಿಗೂ ಸಹ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸುವುದು ಅತೀ ಅವಶ್ಯವಾಗಿರುತ್ತದೆ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ  ಎಸ್.ಹೆಚ್. ಗುರುಮೂರ್ತಿ, ಬಿ. ವೆಂಕಟರಾಮ್, ಟಿ.ಸಿ.ಬಸವರಾಜಯ್ಯ. ಎಂ.ಪಿ. ರಮೇಶ್, ಪಾಂಡುರಾಜ್. ಎಸ್.ಕೆ.ನಾಮದೇವ, ಹಾಲೇಶ್, ಯು.ಮೂರ್ತಿ, ಬಿ. ವಿನಾಯಕ, ಇತರರು ಹಾಜರಿದ್ದರು.